* ಪದವಿ ಪ್ರಮಾಣ ಪತ್ರ ಮತ್ತು ತಾತ್ಕಾಲಿಕ ಪ್ರಮಾಣಪತ್ರಗಳ ಮೇಲೆ ಆಧಾರ್ ಸಂಖ್ಯೆ ನಮೂದಿಸದಂತೆ ವಿಶ್ವ ವಿದ್ಯಾಲಯ ಧನಸಹಾಯ ಆಯೋಗ (UGC) ಎಲ್ಲ ವಿಶ್ವವಿದ್ಯಾಲಯಗಳಿಗೆ ಸೂಚನೆ ನೀಡಿದೆ.* ಆಧಾರ್ ಕಾರ್ಡನ್ ಸಂಪೂರ್ಣ ಸಂಖ್ಯೆಗಳ ಬದಲು ಒಂದೆರಡು ಸಂಖ್ಯೆಗಳನ್ನು ಔಪಚಾರಿಕತೆಗೆ ನಮೂದಿಸಬಹುದಾಗಿದ್ದು, ದೇಶದ ಎಲ್ಲ ವಿಶ್ವವಿದ್ಯಾಲಯಗಳಿಗೆ ಸೂಚನೆ ನೀಡಲಾಗಿದೆ ಎಂದು ಯುಜಿಸಿ ತಿಳಿಸಿದೆ.* ಆಧಾರ್ ಸಂಖ್ಯೆಯನ್ನು ಪಡೆದುಕೊಳ್ಳುವ ಯಾವುದೇ ಸಂಸ್ಥೆಯು ಅದಕ್ಕೆ ಸಂಬಂಧಿಸಿದ ಯಾವುದೇ ಮಾಹಿತಿಯನ್ನು ಬಹಿರಂಗಪಡಿಸಬಾರದು ಎಂಬ ನಿಯಮ ಇದೆ ಎಂದು ಯುಜಿಸಿ ಕಾರ್ಯದರ್ಶಿ ಮನೀಶ್ ಜೋಷಿ ಅವರು ತಿಳಿಸಿದ್ದಾರೆ.