* ಪಚ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿಯಾದ ಸಿಪಿಎಂ ಪಕ್ಷದ ಬುದ್ಧದೇವ ಭಟ್ಟಾಚಾರ್ಯ ಆಗಸ್ಟ್ 8  ರಂದು ನಿಧನರಾಗಿದ್ದಾರೆ.* ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು ಎಂದು ಸಿಪಿಎಂ ರಾಜ್ಯ ಕಾರ್ಯದರ್ಶಿ ಮಹಮ್ಮದ್ ಸಲೀಂ ಅವರು ತಿಳಿಸಿದ್ದಾರೆ. * ಬುದ್ಧದೇವ್ ಭಟ್ಟಾಚಾರ್ಯ ಅವರಿಗೆ 80 ವರ್ಷ ವಯಸ್ಸಾಗಿತ್ತು. ಭಟ್ಟಾಚಾರ್ಯ ಅವರು ಪತ್ನಿ ಮೀರಾ ಮತ್ತು ಪುತ್ರಿ ಸುಚೇತನಾ ಅವರನ್ನು ಅಗಲಿದ್ದಾರೆ.ಬುದ್ಧದೇವ್ ಭಟ್ಟಾಚಾರ್ಯ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು.* ಭಾರತೀಯ ಕಮ್ಯೂನಿಸ್ಟ್ ಪಕ್ಷ ಮಾರ್ಕ್ಸ್‌ವಾದ (ಸಿಪಿಐಎಂ) ಉನ್ನತ ನಿರ್ಧಾರ ತೆಗೆದುಕೊಳ್ಳುವ ಸಮಿತಿಯಾದ ಪಾಲಿಟ್‌ ಬ್ಯೂರೊದ ಮಾಜಿ ಸದಸ್ಯರಾಗಿದ್ದರು.* ಪಶ್ಚಿಮ ಬಂಗಾಳದಲ್ಲಿ ಎಡಪಕ್ಷದ 34 ವರ್ಷಗಳ ಆಡಳಿತದಲ್ಲಿ ಭಟ್ಟಾಚಾರ್ಯ ಅವರು 2000 ರಿಂದ 2011 ರವರೆಗೆ ಸತತ 11 ವರ್ಷಗಳ ಕಾಲ ಅಧಿಕಾರದಲ್ಲಿದ್ದ ಎರಡನೇ ಮತ್ತು ಕೊನೆಯ ಸಿಪಿಎಂ ಮುಖ್ಯಮಂತ್ರಿಯಾಗಿದ್ದರು.* ಭಟ್ಟಾಚಾರ್ಯ ಅವರು 2011 ರ ವಿಧಾನಸಭಾ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿಯವರ ಟಿಎಂಪಿ ಪಕ್ಷದ ವಿರುದ್ಧ ಸೋಲು ಕಂಡಿದ್ದರು. ಆ ಮೂಲಕ ರಾಜ್ಯದಲ್ಲಿ ಎಡರಂಗದ 34 ವರ್ಷಗಳ ಆಳ್ವಿಕೆ ಕೊನೆಗೊಂಡಿತ್ತು.* ಕ್ಷೀಣಿಸುತ್ತಿರುವ ಆರೋಗ್ಯದಿಂದಾಗಿ ಅವರು ರಾಜಕೀಯ ರಂಗದಿಂದ ದೂರ ಉಳಿದಿದ್ದರು. ಸಿಪಿಎಂ ಪಕ್ಷದ ಪಾಲಿಟ್‌ಬ್ಯೂರೊ ಮತ್ತು ಕೇಂದ್ರ ಸಮಿತಿಯ ಸದಸ್ಯತ್ವಕ್ಕೆ 2015ರಲ್ಲಿ ರಾಜೀನಾಮೆ ನೀಡಿದ್ದರು. 2018ರಲ್ಲಿ ಪಕ್ಷದ ರಾಜ್ಯ ಕಾರ್ಯದರ್ಶಿ ಸ್ಥಾನಕ್ಕೂ ರಾಜೀನಾಮೆ ಸಲ್ಲಿಸಿದ್ದರು.