➤ ಹಾಲೋವುಡ್, ಲಾಸ್ ಏಂಜಲೀಸ್: ಚಲನಚಿತ್ರ ರಂಗದ ಅತ್ಯುನ್ನತ ಗೌರವ ಎಂದೇ ಪರಿಗಣಿಸಲ್ಪಟ್ಟಿರುವ 98ನೇ ಅಕಾಡೆಮಿ ಪ್ರಶಸ್ತಿ (Oscars 2026) ಪ್ರದಾನ ಸಮಾರಂಭವು ಲಾಸ್ ಏಂಜಲೀಸ್‌ನ ಐಕಾನಿಕ್ 'ಡಾಲ್ಬಿ ಥಿಯೇಟರ್'ನಲ್ಲಿ ಅದ್ಧೂರಿಯಾಗಿ ಜರುಗಿತು. ಈ ಬಾರಿಯ ಆಸ್ಕರ್ ರೇಸ್‌ನಲ್ಲಿ 'ಒನ್ ಬ್ಯಾಟಲ್ ಆಫ್ಟರ್ ಅನದರ್' (One Battle After Another) ಮತ್ತು 'ಸಿನ್ನರ್ಸ್' (Sinners) ಚಿತ್ರಗಳು ಅತಿ ಹೆಚ್ಚು ವಿಭಾಗಗಳಲ್ಲಿ ಪೈಪೋಟಿ ನಡೆಸಿ ಗಮನ ಸೆಳೆದಿವೆ.➤ ಪ್ರಮುಖ ಹೈಲೈಟ್ಸ್:ಸಿನ್ನರ್ಸ್ (Sinners): ರಿಯಾನ್ ಕೂಗ್ಲರ್ ನಿರ್ದೇಶನದ ಈ ಚಿತ್ರವು ಬರೋಬ್ಬರಿ 16 ನಾಮನಿರ್ದೇಶನಗಳನ್ನು ಪಡೆಯುವ ಮೂಲಕ ದಾಖಲೆ ಬರೆಯಿತಾದರೂ, ಅಂತಿಮವಾಗಿ 4 ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿತು.ಒನ್ ಬ್ಯಾಟಲ್ ಆಫ್ಟರ್ ಅನದರ್: ಲಿಯೊನಾರ್ಡೊ ಡಿಕಾಪ್ರಿಯೊ ನಟನೆಯ ಈ ಚಿತ್ರವು 13 ನಾಮನಿರ್ದೇಶನಗಳಲ್ಲಿ 6 ಪ್ರಶಸ್ತಿಗಳನ್ನು ಗೆದ್ದು ಬೀಗಿದೆ.ಗಿಲ್ಲೆರ್ಮೊ ಡೆಲ್ ಟೊರೊ ಅವರ 'ಫ್ರಾಂಕೆನ್‌ಸ್ಟೈನ್' (Frankenstein): ತಾಂತ್ರಿಕ ವಿಭಾಗಗಳಲ್ಲಿ ಪ್ರಾಬಲ್ಯ ಸಾಧಿಸಿ 3 ಪ್ರಶಸ್ತಿಗಳನ್ನು ಗೆದ್ದಿದೆ.ಮಾರ್ಟಿ ಸುಪ್ರೀಮ್: ತಿಮೋತಿ ಚಾಲಮೆಟ್ ನಟನೆಯ ಈ ಚಿತ್ರ 9 ನಾಮಿನೇಷನ್ ಪಡೆದರೂ ಒಂದೂ ಪ್ರಶಸ್ತಿ ಗೆಲ್ಲಲಾಗದೆ ನಿರಾಸೆ ಅನುಭವಿಸಿತು.➤ 98ನೇ ಆಸ್ಕರ್ ಪ್ರಶಸ್ತಿ ವಿಜೇತರ ಪಟ್ಟಿ:ಅತ್ಯುತ್ತಮ ಚಿತ್ರ (Best Picture): ಒನ್ ಬ್ಯಾಟಲ್ ಆಫ್ಟರ್ ಅನದರ್ಅತ್ಯುತ್ತಮ ನಿರ್ದೇಶಕ: ಪಾಲ್ ಥಾಮಸ್ ಆಂಡರ್ಸನ್: ಒನ್ ಬ್ಯಾಟಲ್ ಆಫ್ಟರ್ ಅನದರ್ಅತ್ಯುತ್ತಮ ನಟ: ಮೈಕೆಲ್ ಬಿ ಜೋರ್ಡಾನ್ ಸಿನ್ನರ್ಸ್ (Sinners)ಅತ್ಯುತ್ತಮ ನಟಿ: ಜೆಸ್ಸಿ ಬಕ್ಲಿಹ್ಯಾಮ್ನೆಟ್ (Hamnet)ಅತ್ಯುತ್ತಮ ಪೋಷಕ ನಟ: ಸೀನ್ ಪೆನ್: ಒನ್ ಬ್ಯಾಟಲ್ ಆಫ್ಟರ್ ಅನದರ್ಅತ್ಯುತ್ತಮ ಪೋಷಕ ನಟಿ: ಆಮಿ ಮ್ಯಾಡಿಗನ್ವೆಪನ್ಸ್ (Weapons)ಅತ್ಯುತ್ತಮ ಅನಿಮೇಟೆಡ್ ಚಿತ್ರ: ಕೆ-ಪಾಪ್: ಡೆಮನ್ ಹಂಟರ್ಸ್ಅತ್ಯುತ್ತಮ ಅಂತರಾಷ್ಟ್ರೀಯ ಚಿತ್ರ: ಸೆಂಟಿಮೆಂಟಲ್ ವ್ಯಾಲ್ಯೂ (ನಾರ್ವೆ)ಅತ್ಯುತ್ತಮ ಮೂಲ ಚಿತ್ರಕಥೆ: ಸಿನ್ನರ್ಸ್ (Sinners)ಅತ್ಯುತ್ತಮ ರೂಪಾಂತರ ಚಿತ್ರಕಥೆ: ಒನ್ ಬ್ಯಾಟಲ್ ಆಫ್ಟರ್ ಅನದರ್ಅತ್ಯುತ್ತಮ ಸಿನಿಮಾಟೋಗ್ರಫಿ: ಸಿನ್ನರ್ಸ್ (Sinners)ಅತ್ಯುತ್ತಮ ದೃಶ್ಯ ಪರಿಣಾಮ (VFX): ಅವತಾರ್: ಫೈರ್ ಅಂಡ್ ಆಶ್ಅತ್ಯುತ್ತಮ ಸಂಕಲನ (Editing): ಒನ್ ಬ್ಯಾಟಲ್ ಆಫ್ಟರ್ ಅನದರ್ಅತ್ಯುತ್ತಮ ಮೂಲ ಗೀತೆ: 'ಗೋಲ್ಡನ್'ಕೆ-ಪಾಪ್: ಡೆಮನ್ ಹಂಟರ್ಸ್ ➤ ತಾಂತ್ರಿಕ ಮತ್ತು ಇತರ ಪ್ರಶಸ್ತಿಗಳು:ಅತ್ಯುತ್ತಮ ಪ್ರೊಡಕ್ಷನ್ ಡಿಸೈನ್: ಫ್ರಾಂಕೆನ್‌ಸ್ಟೈನ್ಅತ್ಯುತ್ತಮ ಕಾಸ್ಟ್ಯೂಮ್ ಡಿಸೈನ್: ಫ್ರಾಂಕೆನ್‌ಸ್ಟೈನ್ಅತ್ಯುತ್ತಮ ಮೇಕಪ್ ಮತ್ತು ಹೇರ್‌ಸ್ಟೈಲಿಂಗ್: ಫ್ರಾಂಕೆನ್‌ಸ್ಟೈನ್ಅತ್ಯುತ್ತಮ ಸೌಂಡ್: F1ಅತ್ಯುತ್ತಮ ಕ್ಯಾಸ್ಟಿಂಗ್: ಒನ್ ಬ್ಯಾಟಲ್ ಆಫ್ಟರ್ ಅನದರ್ಅತ್ಯುತ್ತಮ ಸಾಕ್ಷ್ಯಚಿತ್ರ (Documentary Feature): ಮಿಸ್ಟರ್ ನೋಬಡಿ ಎಗೇನ್ಸ್ಟ್ ಪುಟಿನ್ಅತ್ಯುತ್ತಮ ಲೈವ್ ಆಕ್ಷನ್ ಕಿರುಚಿತ್ರ: ದಿ ಸಿಂಗರ್ಸ್ & ಟೂ ಪೀಪಲ್ ಎಕ್ಸ್ಚೇಂಜಿಂಗ್ ಸಲೈವಾ (ಜಂಟಿ ವಿಜೇತರು)➤ ಭಾರತೀಯ ಮೂಲದ ನಿರ್ದೇಶಕ ಅಲೆಕ್ಸಾಂಡರ್ ಸಿಂಗ್ (Alexandre Singh) ಅವರು ನಿರ್ದೇಶಿಸಿದ 'ಟೂ ಪೀಪಲ್ ಎಕ್ಸ್ಚೇಂಜಿಂಗ್ ಸಲೈವಾ' (Two People Exchanging Saliva) ಚಿತ್ರಕ್ಕೆ ಅತ್ಯುತ್ತಮ ಲೈವ್ ಆಕ್ಷನ್ ಕಿರುಚಿತ್ರ ವಿಭಾಗದಲ್ಲಿ ಪ್ರಶಸ್ತಿ ಲಭಿಸಿದೆ.