Job Description: ➤ ದೇಶದ ಆರ್ಥಿಕತೆ ಮತ್ತು ಕೈಗಾರಿಕಾ ವಲಯದಲ್ಲಿ ಪ್ರಮುಖ ಬೆಳವಣಿಗೆಯೊಂದರಲ್ಲಿ, ಒಡಿಶಾ ಸರ್ಕಾರವು ಜೂನ್ 17, 2026 ರಂದು ಬರೊಬ್ಬರಿ ₹76,611.86 ಕೋಟಿ (ಅಂದಾಜು 76,612 ಕೋಟಿ) ಮೌಲ್ಯದ 20 ಬೃಹತ್ ಕೈಗಾರಿಕಾ ಯೋಜನೆಗಳಿಗೆ ಅನುಮೋದನೆ ನೀಡಿದೆ. ಒಡಿಶಾ ಮುಖ್ಯಮಂತ್ರಿಗಳ ಅಧ್ಯಕ್ಷತೆಯ ಉನ್ನತ ಮಟ್ಟದ ಪ್ರಾಧಿಕಾರವು ಈ ಹಸಿರು ನಿಶಾನೆ ತೋರಿಸಿದ್ದು, ಈ ಯೋಜನೆಗಳ ಮೂಲಕ ರಾಜ್ಯದ 9 ಜಿಲ್ಲೆಗಳಲ್ಲಿ ಒಟ್ಟು 50,517 ಉದ್ಯೋಗಗಳು ಸೃಷ್ಟಿಯಾಗಲಿವೆ.➤ ಯಾವೆಲ್ಲಾ ವಲಯಗಳಲ್ಲಿ ಹೂಡಿಕೆ ಮಾಡಲಾಗುತ್ತಿದೆ? (Sector-wise Investment): ಏರೋಸ್ಪೇಸ್ ಮತ್ತು ಡಿಫೆನ್ಸ್ (Aerospace & Defence) ನವೀಕರಿಸಬಹುದಾದ ಇಂಧನ (Renewable Energy & Power) ಲ್ಯಾಂಬ್-ಗ್ರೋನ್ ಡೈಮಂಡ್ಸ್ (Lab-Grown Diamonds - ಕೃತಕ ವಜ್ರ ತಯಾರಿಕೆ) ರಾಸಾಯನಿಕಗಳು ಮತ್ತು ಫಾರ್ಮಾಸ್ಯುಟಿಕಲ್ಸ್ (Chemicals & Pharmaceuticals) ಉಕ್ಕು ಮತ್ತು ಕಬ್ಬಿಣ (Steel, Iron & Ferro Alloys) ➤ ಮೂರು ಪ್ರಮುಖ ಬೃಹತ್ ಯೋಜನೆಗಳು (Major Projects Highlighted): ಟಾಟಾ ಪವರ್ ರಿನ್ಯೂವಬಲ್ ಎನರ್ಜಿ ಲಿಮಿಟೆಡ್ (Tata Power): ಗಂಜಾಂ ಜಿಲ್ಲೆಯಲ್ಲಿ ಸೋಲಾರ್ ಇಂಗುಗಳು, ವೇಫರ್‌ಗಳು ಮತ್ತು ಸೋಲಾರ್ ಪಿವಿ ಸೆಲ್‌ಗಳ (Solar PV Cells) ತಯಾರಿಕಾ ಘಟಕಕ್ಕಾಗಿ ₹10,000 ಕೋಟಿ ಹೂಡಿಕೆ ಮಾಡಲಿದೆ. ಇದರಿಂದ ಸುಮಾರು 5,000 ಉದ್ಯೋಗಗಳು ಸೃಷ್ಟಿಯಾಗಲಿವೆ. ರಶ್ಮಿ ಮೆಟಲರ್ಜಿಕಲ್ (Rashmi Metallurgical): ಜಜ್‌ಪುರದಲ್ಲಿ ವರ್ಷಕ್ಕೆ 4 ಮಿಲಿಯನ್ ಟನ್ (4 MTPA) ಸಾಮರ್ಥ್ಯದ ಸಂಯೋಜಿತ ಉಕ್ಕು ಸ್ಥಾವರವನ್ನು (Integrated Steel Plant) ಸ್ಥಾಪಿಸಲು ₹15,000 ಕೋಟಿ ಹೂಡಿಕೆ ಮಾಡಲಿದೆ. ಇದು ಬರೋಬ್ಬರಿ 11,000 ಉದ್ಯೋಗಗಳನ್ನು ತರಲಿದೆ. ಶ್ಯಾಮ್ ಮೆಟಾಲಿಕ್ಸ್ (Shyam Metalics): ಸಂಬಲ್‌ಪುರದಲ್ಲಿ ಉಕ್ಕು ಘಟಕ ಸ್ಥಾಪನೆಗಾಗಿ ₹7,580 ಕೋಟಿ ಹೂಡಿಕೆ ಮಾಡಲಿದೆ. ಲ್ಯಾಬ್-ಗ್ರೋನ್ ಡೈಮಂಡ್ಸ್ (ಕೃತಕ ವಜ್ರ): ಖೋರ್ಧಾ ಜಿಲ್ಲೆಯಲ್ಲಿ ಮೂರು ಕೃತಕ ವಜ್ರ ತಯಾರಿಕಾ ಘಟಕಗಳು ಬರಲಿದ್ದು, ಇದಕ್ಕಾಗಿ ₹9,817.50 ಕೋಟಿ ಹೂಡಿಕೆ ಮಾಡಲಾಗುತ್ತಿದೆ. ಇದು 8,100 ಜನರಿಗೆ ಉದ್ಯೋಗ ನೀಡಲಿದೆ.KAS, PSI, PC, FDA, SDA, RRB, PDO ಸೇರಿದಂತೆ ಇನ್ನಿತರ ಪರೀಕ್ಷೆಗಳ ಹಳೆ ಪ್ರಶ್ನೆ ಪತ್ರಿಕೆಗಳನ್ನು ಅಭ್ಯಾಸ ಮಾಡಲು ಇಲ್ಲಿ ಕ್ಲಿಕ್ ಮಾಡಿ