* ಒಡಿಶಾದಲ್ಲಿ ಈಗಷ್ಟೇ ಅಧಿಕಾರಕ್ಕೆ ಬಂದ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರವು ಬಿಜು ಪಟ್ನಾಯಕ್ ಕ್ರೀಡಾ ಪ್ರಶಸ್ತಿಯ ಹೆಸರನ್ನು 'ಒಡಿಶಾ ರಾಜ್ಯ ಕ್ರೀಡಾ ಸಮ್ಮಾನ್' ಎಂದು ಬದಲಾಯಿಸಿದೆ.* ಕ್ರೀಡಾ ಮತ್ತು ಯುವಜನರ ಸೇವಾ ಇಲಾಖೆಯು ಇದಕ್ಕೆ ಸಂಬಂಧಿಸಿದಂತೆ ಜುಲೈ 19 ರಂದು ಪ್ರಶಸ್ತಿಯ ಮಾರ್ಗಸೂಚಿಗಳನ್ನು ಹೊರಡಿಸಿದೆ. ಎಂಟು ವಿಭಾಗಗಳಲ್ಲಿ ವಾರ್ಷಿಕ ಪ್ರಶಸ್ತಿಗಳನ್ನು ನೀಡಲಾಗುವುದು. ನಗದು ಬಹುಮಾನದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಸ್ಪಷ್ಟಪಡಿಸಿದೆ.* ಜೀವಮಾನ ಸಾಧನೆ ಪ್ರಶಸ್ತಿಗೆ 3 ಲಕ್ಷ ನಗದು. ಅತ್ಯುತ್ತಮ ಸಾಧನೆ ತೋರಿದವರಿಗೆ 2 ಲಕ್ಷ ಹಾಗೂ ಶ್ರೇಷ್ಠ ತರಬೇತುದಾರರು ಹಾಗೂ ಇತರ ವಿಭಾಗದ ಪ್ರಶಸ್ತಿಗಳ ಮೊತ್ತ ತಲಾ 1 ಲಕ್ಷ ರೂ. ನೀಡಲಾಗುತ್ತದೆ.* ಈ ಹಿಂದಿನ ಬಿಜೆಪಿ ಆಡಳಿತ ಜಾರಿಗೊಳಿಸಿದ್ದ ಜನಪ್ರಿಯ ಯೋಜನೆಗಳ ಹೆಸರನ್ನು ಬದಲಾಯಿಸಲು ಹಾಲಿ ಬಿಜೆಪಿ ನೇತೃತ್ವದ ಸರ್ಕಾರ ಮುಂದಾಗಿದೆ.