* ಉಕ್ರೇನ್‌ನ ಮೇಲೆ ರಷ್ಯಾದ ಆಕ್ರಮಣದ ಎರಡು ವರ್ಷಗಳ ನಂತರ ಸ್ವೀಡನ್ ಮಾರ್ಚ್ 7ರಂದು  ಔಪಚಾರಿಕವಾಗಿ ಯುಎಸ್ ಬೆಂಬಲಿತ ನಾರ್ತ್ ಅಟ್ಲಾಂಟಿಕ್ ಟ್ರೇಟಿ ಆರ್ಗನೈಸೇಶನ್ (ನ್ಯಾಟೋ ) ಮಿಲಿಟರಿ ಮೈತ್ರಿಗೆ ಸೇರ್ಪಡೆಯಾಗಿದೆ.* ಸ್ವೀಡನ್ ಈಗ ಮೈತ್ರಿಕೂಟದ 32 ನೇ ಸದಸ್ಯ ರಾಷ್ಟ್ರವಾಗಿ ಸ್ವೀಡನ್ ಸೇರ್ಪಡೆಗೊಳ್ಳಲಿದೆ. * ಟರ್ಕಿ ಮತ್ತು ಹಂಗೇರಿ ದೇಶಗಳು ಅನುಮೋದನೆ ನೀಡಿದ್ದರಿಂದ ಸ್ವೀಡನ್ ಸದಸ್ಯತ್ವ ಪಡೆಯುವುದು ಸುಲಭವಾಯಿತು ಎಂದು ನ್ಯಾಟೋ ತಿಳಿಸಿದೆ.* ಕ್ರಿ.ಶ 1949 ರಲ್ಲಿ ನ್ಯಾಟೋ ಎನ್ನುವುದು ರಾಷ್ಟ್ರೀಯ ಸಂಘಟನೆ ಸ್ಥಾಪಿಸಲಾಯಿತು.* ನ್ಯಾಟೋ ವಿಶ್ವದ ಇತಿಹಾಸದಲ್ಲಿ ಅತ್ಯಂತ ಶಕ್ತಿಶಾಲಿ ರಕ್ಷಣಾತ್ಮಕ ಮೈತ್ರಿಯಾಗಿದೆ. 75 ವರ್ಷಗಳ ಹಿಂದೆ ನಮ್ಮ ಒಕ್ಕೂಟವು ವಿಶ್ವ ಸಮರ II ರ ಭಗ್ನಾವಶೇಷದಿಂದ ಸ್ಥಾಪಿಸಲ್ಪಟ್ಟಾಗ ನಮ್ಮ ನಾಗರಿಕರ ಸುರಕ್ಷತೆಯನ್ನು ಖಾತ್ರಿಪಡಿಸುವುದು ಇದರ ಧ್ಯೇಯವಾಗಿತ್ತು ಎಂದು ಶ್ವೇತಭವನ ಪ್ರಕಟಣೆಯಲ್ಲಿ ಹೇಳಿದೆ.