* ನಾಡೋಜ ಡಾ. ಬರಗೂರು ಪ್ರತಿಷ್ಠಾನದ ವತಿಯಿಂದ ನೀಡುವ 'ರಾಜಲಕ್ಷ್ಮಿ ಬರಗೂರು ಪ್ರಶಸ್ತಿ'ಗೆ ಕಲಬುರಗಿಯ ಸಾಮಾಜಿಕ  ಹೋರಾಟಗಾರ್ತಿ ಕೆ. ನೀಲಾ ಅವರು ಹಾಗೂ ತುಮಕೂರಿನ ಅಲೆಮಾರಿ ಜನಾಂಗದ ಹೋರಾಟಗಾರ್ತಿ ರಾಮಕ್ಕ ಅವರು ಆಯ್ಕೆಯಾಗಿದ್ದಾರೆ.* ಬರಗೂರು ರಾಮಚಂದ್ರಪ್ಪ ಅವರ ಪತ್ನಿ 'ರಾಜಲಕ್ಷ್ಮಿ ಬರಗೂರು' ಅವರ ಹೆಸರಿನಲ್ಲಿ ಪ್ರತಿ ವರ್ಷ   ಇಬ್ಬರು ಮಹಿಳಾ ಸಾಧಕರಿಗೆ ಪ್ರಶಸ್ತಿಯನ್ನು ನೀಡಲಾಗುತ್ತಿದ್ದು, ಈ ಪ್ರಶಸ್ತಿಯು ತಲಾ 10 ಸಾವಿರ ನಗದು ಬಹುಮಾನವನ್ನು ಒಳಗೊಂಡಿದೆ.* ಸರ್ಕಾರಿ ಕಲಾ ಕಾಲೇಜಿನ ಸಭಾಂಗಣದಲ್ಲಿ ಮಾರ್ಚ್ 12 ರಂದು ನಟಿ ಹಾಗೂ ವಿಧಾನ ಪರಿಷತ್ತಿನ ಸದಸ್ಯೆ ಉಮಾಶ್ರೀ ಅವರು " ರಾಜಲಕ್ಷ್ಮಿ ಬರಗೂರು" ಪ್ರಶಸ್ತಿಯನ್ನು ಮಹಿಳಾ ಸಾಧಕರಿಗೆ ಪ್ರಧಾನ ಮಾಡಲಿದ್ದಾರೆ.