*ಭಾರತದ ಸಂವಿಧಾನದ ದಿನವನ್ನು ಪ್ರತಿವರ್ಷ ನವೆಂಬರ್ 26 ರಂದು ಆಚರಿಸಲಾಗುತ್ತದೆ, ಮತ್ತು ಸಂವಿಧಾನದ ಅಂಗೀಕಾರದ ನೆನಪಿಗಾಗಿ ಇದನ್ನು ಆಚರಿಸಲಾಗುವುದು.2015 ನವೆಂಬರ್ 19 ರಂದು ಭಾರತ ಸರ್ಕಾರವು ನವೆಂಬರ್ 26 ಅನ್ನು ಸಂವಿಧಾನದ ದಿನ ಎಂದು ಗೆಜೆಟ್ ಪ್ರಕಟಣೆಯ ಮೂಲಕ ಘೋಷಿಸಿತು.*ಈ ಸಂವಿಧಾನದ ದಿನವನ್ನು "ರಾಷ್ಟ್ರೀಯ ಕಾನೂನು ದಿನ" ಎಂದು ಸಹ ಕರೆಯಲಾಗುವುದು.*ಸಂವಿಧಾನ 1949 ನವೆಂಬರ್ 26 ರಂದು ಅಂಗೀಕಾರವಾಯಿತು, ಮತ್ತು 1950 ಜನೆವರಿ 26 ರಂದು ಸಂವಿಧಾನ ಜಾರಿಗೆ ಬಂದಿದೆ.*ಈ ಸಂವಿಧಾನವನ್ನು ರಚಿಸಲು ತಗೆದುಕೊಂಡ ಒಟ್ಟು ಸಮಯ 2ವರ್ಷ 11ತಿಂಗಳು 18ದಿನ ಮತ್ತು 63,96,729 ಇದರ ವೆಚ್ಚವಾಗಿದೆ.*ಭಾರತದ ಸಂವಿಧಾನವು 25 ಭಾಗ, 12 ಅನುಸೂಚಿ ಸುಮಾರು 465 ಕ್ಕಿಂತಲೂ ಹೆಚ್ಚು ವಿಧಿಗಳನ್ನು ಒಳಗೊಂಡಿದೆ.