* ಮಕ್ಕಳ ದಿನಾಚರಣೆ ವಿಶೇಷ ದಿನವಾಗಿದ್ದು, ಮಕ್ಕಳ ಹಕ್ಕುಗಳು, ಆರೈಕೆ ಮತ್ತು ಶಿಕ್ಷಣದ ಬಗ್ಗೆ ಜಾಗೃತಿ ಮೂಡಿಸಲು ಭಾರತದಾದ್ಯಂತ ಪ್ರತಿವರ್ಷ ನವೆಂಬರ್ 14 ರಂದು ಮಕ್ಕಳ ದಿನವನ್ನು  ಆಚರಿಸಲಾಗುತ್ತದೆ. * ಮಕ್ಕಳ ದಿನದ 2024 ರ ಥೀಮ್ "ಇಂದಿನ ಮಕ್ಕಳೇ ನಾಳಿನ ನಾಯಕರು" (Children of today, leaders of tomorrow) ಎಂಬುದು ಧೈಯವಾಕ್ಯವಾಗಿದೆ.* ಈ ದಿನವನ್ನು ಪ್ರಧಾನವಾಗಿ ಭಾರತದ ಮೊದಲ ಪ್ರಧಾನಮಂತ್ರಿ ಜವಾಹರಲಾಲ್ ನೆಹರೂ ಅವರ ಜನ್ಮದಿನವನ್ನು ಸ್ಮರಿಸಿ ಆಚರಿಸುತ್ತಾರೆ, ಏಕೆಂದರೆ ಅವರಿಗೆ ಮಕ್ಕಳ ಬಗ್ಗೆ ಅಪಾರ ಪ್ರೀತಿ ಇತ್ತು, ಮತ್ತು ಮಕ್ಕಳು ಅವರನ್ನು "ಚಾಚಾ ನೆಹರು" ಎಂದು ಕರೆಯುತ್ತಿದ್ದರು.* ಜವಾಹರಲಾಲ್ ನೆಹರೂ ಅವರ ನಿಧನದ ನಂತರ ಅವರ ಜನ್ಮ ದಿನಾಚರಣೆಯನ್ನು ಭಾರತದಲ್ಲಿ ಮಕ್ಕಳ ದಿನವನ್ನಾಗಿ ಆಚರಿಸಲಾಗುತ್ತದೆ. ಅವರು ಮಕ್ಕಳೊಂದಿಗೆ ಚಾಚಾ ನೆಹರು ಎಂದು ಬಹಳ ಜನಪ್ರಿಯರಾಗಿದ್ದರಿಂದ ಇದನ್ನು ಮಾಡಲಾಯಿತು.* ಅಮೆರಿಕದಲ್ಲಿ ಜೂನ್ ತಿಂಗಳ ಮೊದಲ ಭಾನುವಾರದಂದು, ಜರ್ಮನಿಯಲ್ಲಿ ಸೆಪ್ಟೆಂಬರ್ 20ರಂದು, ನ್ಯೂಜಿಲೆಂಡ್‌ನಲ್ಲಿ ಮಾರ್ಚ್ ಮೊದಲ ಭಾನುವಾರದಂದು, ಥಾಯ್ಲೆಂಡ್ ದೇಶದಲ್ಲಿ ಪ್ರತಿವರ್ಷ ಜನವರಿ ತಿಂಗಳಿನ ಎರಡನೆಯ ಶನಿವಾರ; ಟರ್ಕಿ ದೇಶದಲ್ಲಿ ಏಪ್ರಿಲ್ 23ರಂದು; ಟುನಿಷಿಯಾದಲ್ಲಿ ಮಾರ್ಚ್ 21ರಂದು; ಜಪಾನ್‌ನಲ್ಲಿ ಮೇ 5ರಂದು ಮತ್ತು ವನುತಾದಲ್ಲಿ ಜುಲೈ 24ರಂದು ಮಕ್ಕಳ ದಿನ ಆಚರಿಸಲಾಗುತ್ತದೆ.