Job Description: * ಇಂದಿನಿಂದ 13ನೇ ಆವೃತ್ತಿಯ ಮಹಿಳಾ ಬಾಕ್ಸಿಂಗ್ ವಿಶ್ವ ಚಾಂಪಿಯನ್‌ಶಿಪ್‌ ನವದೆಹಲಿ ಆರಂಭ 65 ದೇಶಗಳ 300ಕ್ಕೂ ಅಧಿಕ ಮಹಿಳಾ ಬಾಕ್ಸರ್‌ಗಳು ಕೂಟದಲ್ಲಿ ಭಾಗಿಯಾಗಿದ್ದಾರೆ . * 13ನೇ ಆವೃತ್ತಿಯ ಮಹಿಳಾ ಬಾಕ್ಸಿಂಗ್‌ ವಿಶ್ವ ಚಾಂಪಿಯನ್‌ಶಿಪ್‌ ಮಾರ್ಚ್ 16 ರಿಂದ ನವದೆಹಲಿಯಲ್ಲಿ ಆರಂಭವಾಗಲಿದ್ದು, 65 ದೇಶಗಳ 300ಕ್ಕೂ ಹೆಚ್ಚು ಬಾಕ್ಸರ್‌ಗಳು ಸ್ಪರ್ಧಿಸಲಿದ್ದಾರೆ. * ಬಾಕ್ಸಿಂಗ್‌ ವಿಶ್ವ ಚಾಂಪಿಯನ್‌ಶಿಪ್‌ ನಲ್ಲಿ ಭಾರತದ 12 ಸ್ಪರ್ಧಿಗಳು ಸ್ಪರ್ಧಿಸಲಿದ್ದಾರೆ, ಹಾಲಿ ಚಾಂಪಿಯನ್‌ ನಿಖಾತ್‌ ಜರೀನ್‌(50 ಕೆ.ಜಿ.), ಒಲಿಂಪಿಕ್ಸ್‌ ಪದಕ ವಿಜೇತೆ ಲವ್ಲೀನಾ ಬೊರ್ಗೊಹೈನ್‌(75 ಕೆ.ಜಿ.) ಸ್ಪರ್ಧಿಸಲಿದ್ದಾರೆ.* ಟೂರ್ನಿಯಲ್ಲಿ ಚಿನ್ನದ ಪದಕ ಗೆಲ್ಲುವ ಬಾಕ್ಸರ್‌ಗಳಿಗೆ ತಲಾ 1 ಲಕ್ಷ ಅಮೆರಿಕನ್‌ ಡಾಲರ್‌(ಅಂದಾಜು 82.75 ಲಕ್ಷ ರು.) ಬಹುಮಾನ ಸಿಗಲಿದೆ. ಬೆಳ್ಳಿ ವಿಜೇತರಿಗೆ ತಲಾ 41.37 ಲಕ್ಷ, ಸೆಮಿಫೈನಲ್‌ನಲ್ಲಿ ಸೋತು ಕಂಚಿಗೆ ತೃಪ್ತಿಪಡುವ ಇಬ್ಬರೂ ಬಾಕ್ಸರ್‌ಗಳಿಗೆ ತಲಾ 20.68 ಲಕ್ಷ ರು. ಬಹುಮಾನ ಮೊತ್ತ ದೊರೆಯಲಿದೆ.