*ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ವೀರ ಯೋಧರ ಸ್ಮರಣಾರ್ಥ 'ಮೇರಿ ಮಾತಿ ಮೇರಾ ದೇಶ್' ಅಭಿಯಾನಕ್ಕೆ ದೇಶಾದ್ಯಂತ 02/08/2023 ರಂದು ಚಾಲನೆ ನೀಡಲಾಯಿತು. ಹಾಗೂ ಈ ಅಭಿಯಾನವು ಆಗಸ್ಟ್ 09 ರಿಂದ ಆಗಸ್ಟ್ 30 ರವರೆಗೆ ಎರಡು ಹಂತಗಳಲ್ಲಿ ನಡೆಯಲಿದೆ.*ಹುತಾತ್ಮ ಯೋಧರ ಸ್ಮರಣಾರ್ಥ ದೇಶದ ಪ್ರತಿ ಗ್ರಾ.ಪಂ.ಗಳಲ್ಲಿ ವಿಶೇಷ ಶಾಸನಗಳನ್ನು ಸ್ಥಾಪಿಸಲಾಗುವುದು.*'ನನ್ನ ಭೂಮಿ ನನ್ನ ದೇಶ್' ಅಭಿಯಾನದ ಅಡಿಯಲ್ಲಿ ಅಮೃತ ಕಲಶ ಯಾತ್ರೆಯನ್ನು ಆಯೋಜಿಸಲಾಗಿದ್ದು,ಆಗಸ್ಟ್ 30 ರ ವೇಳೆಗೆ ಈ 'ಅಮೃತ ಕಲಶ ಯಾತ್ರೆ'ಯು ದಿಲ್ಲಿ ತಲುಪುವುದರೊಂದಿಗೆ ಅಭಿಯಾನವು ಅಂತ್ಯಗೊಳ್ಳಲಿದೆ. ಮತ್ತು ಈ ಅಭಿಯಾನದಲ್ಲಿ 7500 ಕುಂಡಗಳಲ್ಲಿ ದೇಶದ ವಿವಿಧ ಭಾಗಗಳಿಂದ ಮಣ್ಣನ್ನು ಹಾಗೂ ಸಸಿಗಳನ್ನು ದೆಹಲಿಗೆ ತರಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿಯವರು ತಿಳಿಸಿದರು.