* ಮೇ 15ರಂದು ನಡೆದ ಜಂಟಿ ವರ್ಚುವಲ್ ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ಹಾಲು ಒಕ್ಕೂಟದ (KMF) ನಂದಿನಿ ಲೋಗೋ ಇರುವ ಟಿ20 ತಂಡದ ಜೆರ್ಸಿಯನ್ನು ‘ಕ್ರಿಕೆಟ್ ಸ್ಕಾಟ್ಲೆಂಡ್’ ಅನಾವರಣಗೊಳಿಸಿದೆ. ಸ್ಕಾಟ್ಲೆಂಡ್ ಪುರುಷರ ಟಿ20 ಕ್ರಿಕೆಟ್ ತಂಡದ ಉಪನಾಯಕ ಮ್ಯಾಥ್ಯೂ ಕ್ರಾಸ್ ಮತ್ತು ಬಲಗೈ ಮಧ್ಯಮ ವೇಗಿ ಕ್ರಿಸ್ ಸೋಲ್ ಜೆರ್ಸಿಯನ್ನು ಅನಾವರಣಗೊಳಿಸಿದರು. * 2024 ರ ಟಿ20 ವಿಶ್ವಕಪ್‌ನಲ್ಲಿ ಸ್ಕಾಟ್ಲೆಂಡ್ ಮತ್ತು ಐರ್ಲೆಂಡ್ ಕ್ರಿಕೆಟ್ ತಂಡಗಳ ಪ್ರಾಯೋಜಕತ್ವ ವಹಿಸುವುದಾಗಿ ಏಪ್ರಿಲ್ 21 ರಂದು ಕೆಎಂಎಫ್ ಘೋಷಿಸಿತ್ತು. ನಂದಿನಿಯ ಲೋಗೋವನ್ನು ಸ್ಕಾಟ್ಲೆಂಡ್ ತಂಡದ ಜೆರ್ಸಿಯ ತೋಳಿನ ಭಾಗದಲ್ಲಿ ಮುದ್ರಿಸಲಾಗಿದೆ.* "ನಾವೆಲ್ಲರೂ ಕಾಯುತ್ತಿದ್ದ ಐತಿಹಾಸಿಕ ಕ್ಷಣ ಕೊನೆಗೂ ಬಂದಿದೆ! ನಂದಿನಿ ಲಾಂಛನವು ಸ್ಕಾಟ್ಲಂಡ್ ಮತ್ತು ಐರ್ಲೆಂಡ್ ಜರ್ಸಿಯ ಪ್ರಮುಖ ತೋಳಿನ ಮೇಲೆ . ಮೊದಲ ಬಾರಿಗೆ ದೊಡ್ಡ ಪಂದ್ಯಾವಳಿಯಲ್ಲಿ ಕಾಣಿಸಿಕೊಂಡಿದೆ" ಎಂದು ಕೆಎಂಎಫ್ ಎಕ್ಸ್‌ನಲ್ಲಿ ಬರೆದುಕೊಂಡಿದೆ.