* ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ 31.2 ಕೋಟಿ ಮಹಿಳೆಯರೂ ಸೇರಿದಂತೆ ಒಟ್ಟು 64.2 ಕೋಟಿ ಜನರು ಮತದಾನ ಮಾಡಿದ್ದು ಭಾರತ ವಿಶ್ವದಾಖಲೆ ಸ್ಥಾಪಿಸಿದೆ ಎಂದು ರಾಜೀವ್ ಕುಮಾರ್ ತಿಳಿಸಿದರು.* ವಿಶ್ವದ ಅತಿದೊಡ್ಡ ಚುನಾವಣಾ ಪ್ರಕ್ರಿಯೆಯನ್ನು ಯಶಸ್ವಿಯಾಗಿ ನಡೆಸಲು 68,000 ಮೇಲ್ವಿಚಾರಣಾ ತಂಡಗಳು ಮತ್ತು 1.5 ಕೋಟಿ ಮತಗಟ್ಟೆ ಹಾಗೂ ಭದ್ರತಾ ಸಿಬ್ಬಂದಿ ಭಾಗಿಯಾಗಿದ್ದರು ಎಂದು ಕುಮಾರ್ ಅವರು ಮಾಹಿತಿ ನೀಡಿದರು.*  2019 ರಲ್ಲಿ 540 ಮತಗಟ್ಟೆಗಳಲ್ಲಿ ಮರುಮತದಾನ ನಡೆದಿದ್ದರೆ, ಈ ಬಾರಿ ಕೇವಲ 39 ಕಡೆ ಮರುಮತದಾನ ನಡೆದಿವೆ.* ನಗದು, ಉಡುಗೊರೆಗಳು, ಮದ್ಯ ಮತ್ತು ಮಾದಕದ್ರವ್ಯ ಸೇರಿ ₹10 ಸಾವಿರ ಕೋಟಿ ವಶಕ್ಕೆ ಪಡೆಯಲಾಗಿದೆ. ಕಳೆದ ಬಾರಿ ₹3,500 ಕೋಟಿ ವಶಪಡಿಸಿಕೊಂಡಿತ್ತು.* ಜಮ್ಮು ಮತ್ತು ಕಾಶ್ಮೀರದಲ್ಲಿ ನಾಲ್ಕು ದಶಕಗಳಲ್ಲೇ ಅತ್ಯಧಿಕ ಮತದಾನ (ಶೇ 58.58) ಈ ಬಾರಿ ನಡೆದಿದೆ.