* ನಪ್ರಿಯ ಷೇರು ವಹಿವಾಟು ವೇದಿಕೆ 'ಝೆರೋದಾ' ಸಿಇಒ, ಬೆಂಗಳೂರು ಮೂಲದ ಉದ್ಯಮಿ ನಿತಿನ್‌ ಕಾಮತ್‌ ಅವರು ಈ ಬಾರಿಯ 'ಎಕನಾಮಿಕ್ಸ್‌ ಟೈಮ್ಸ್‌ ವರ್ಷದ ಉದ್ಯಮಿ' ಪ್ರಶಸ್ತಿಗೆ ಭಾಜನರಾಗಿದ್ದಾರೆ.* ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ನಿತಿನ್‌ ಕಾಮತ್‌ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಟೈಮ್ಸ್‌ ಗ್ರೂಪ್‌ ವ್ಯವಸ್ಥಾಪಕ ನಿರ್ದೇಶಕ (ಎಂಡಿ) ವಿನೀತ್‌ ಜೈನ್‌ ವೇದಿಕೆಯಲ್ಲಿ ಉಪಸ್ಥಿತರಿದ್ದರು.* ಯಾವುದೇ ಸಿದ್ಧಸೂತ್ರಗಳನ್ನು ಅನುಸರಿಸದೆ, ಸಮಸ್ಯೆಯೊಂದನ್ನು ಬಗೆಹರಿಸಲು ತಮ್ಮ ಸಾಮಾನ್ಯ ಜ್ಞಾನವನ್ನು ಬಳಸುವ ಹುಡುಗರು ಹೇಗೆ ಒಂದು ಯಶಸ್ವಿ ಉದ್ಯಮವನ್ನು ಕಟ್ಟಬಹುದು ಎಂಬುದಕ್ಕೆ 'ಝೆರೋದಾ' ಒಂದು ಉದಾಹರಣೆ,'' ಎಂದು ಕಾಮತ್‌ ಹೇಳಿದ್ದಾರೆ.