*‘ನೀರಿನ ಹೆಜ್ಜೆ’ ಕೃತಿಯಲ್ಲಿ ಭಾರತದ ಜಲ ನೀತಿಗಳ ಇತಿಹಾಸ ಮತ್ತು ಅಂತರರಾಷ್ಟ್ರೀಯ ಹಿನ್ನಲೆಗಳನ್ನು ವಿಸ್ತಾರವಾಗಿ ವಿವರಿಸಲಾಗಿದೆ. 1956ರ ಆಗಸ್ಟ್‌ 28ರಂದು ನದಿಗಳ ಹಾಗೂ ಕಣಿವೆಗಳ ವಿವಾದಗಳ ಕುರಿತಂತೆ ಅಂತರರಾಷ್ಟ್ರೀಯ ಕಾನೂನುಗಳು ಮತ್ತು ಭಾರತ ಸರ್ಕಾರದ ನಿಲುವುಗಳ ಕುರಿತು ವಿಶ್ಲೇಷಣೆ ನೀಡಲಾಗಿದೆ. ಬಾಂಗ್ಲಾದೇಶದೊಂದಿಗೆ ಬೇಸಿಗೆಯ ಕಾಲದಲ್ಲಿ ನೀರಿನ ಹರಿವು ಹಂಚಿಕೊಳ್ಳುವ ಕುರಿತು ಭಾರತ ಕೈಗೊಂಡ ಒಪ್ಪಂದದ ವಿವರಗಳು ಕೂಡ ಒಳಗೊಂಡಿವೆ.* ನವೆಂಬರ್‌ 5ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ‘ನೀರಿನ ಹೆಜ್ಜೆ’ ಎಂಬ ವಿಶಿಷ್ಟ ಕೃತಿಯನ್ನು ಬಿಡುಗಡೆ ಮಾಡಲಾಗುತ್ತಿದೆ. ಈ ಕೃತಿ ಕರ್ನಾಟಕದ ಜಲ ಸಂಪನ್ಮೂಲಗಳ ಅಭಿವೃದ್ಧಿ, ನದಿಗಳ ವಿವಾದಗಳು, ನೀರಾವರಿ ಯೋಜನೆಗಳ ವಿಸ್ತಾರ, ಮತ್ತು ಅಂತರರಾಷ್ಟ್ರೀಯ ಜಲ ಒಪ್ಪಂದಗಳ ಕುರಿತು ಸಂಪೂರ್ಣ ಮಾಹಿತಿಯನ್ನು ಒಳಗೊಂಡಿದೆ ಎಂದು ಉಪ ಮುಖ್ಯಮಂತ್ರಿ ತಿಳಿಸಿದ್ದಾರೆ.*ಈ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವರಾದ ಎಚ್.ಕೆ. ಪಾಟೀಲ, ಎಂ.ಬಿ. ಪಾಟೀಲ, ಎನ್.ಎಸ್. ಬೋಸರಾಜು, ಮತ್ತು ಸುಪ್ರೀಂ ಕೋರ್ಟ್ ವಕೀಲ ಮೋಹನ ವಿ. ಕಾತರಕಿ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ.*1971ರಲ್ಲಿ ನೀರಾವರಿ ಯೋಜನೆಗಳ ಅಭಿವೃದ್ಧಿಗೆ ವಿಶ್ವ ಬ್ಯಾಂಕ್ ಸಹಕಾರ ನೀಡಲು ಆರಂಭಿಸಿತು ಎಂಬ ವಿಚಾರವೂ ಈ ಕೃತಿಯಲ್ಲಿ ಉಲ್ಲೇಖಿಸಲಾಗಿದೆ. ಕೇಂದ್ರ ಸರ್ಕಾರದ ರಾಷ್ಟ್ರೀಯ ನೀರಾವರಿ ಅಭಿವೃದ್ಧಿ ಸಂಸ್ಥೆಯು ಹಿಮಾಲಯದ 14 ನದಿಗಳು, ದಕ್ಷಿಣ ಭಾರತದ 16 ನದಿಗಳು, ಹಾಗೂ ಕರ್ನಾಟಕದ 37 ನದಿ ಜೋಡಣೆ ಯೋಜನೆಗಳು ಕುರಿತಾದ ವಿಶ್ಲೇಷಣಾತ್ಮಕ ವರದಿಯನ್ನು ಬಿಡುಗಡೆ ಮಾಡಿದೆ — ಆ ಮಾಹಿತಿಯೂ ಈ ಕೃತಿಯ ಭಾಗವಾಗಿದೆ.* ಇದೆ ವೇಳೆ ಉಪ ಮುಖ್ಯಮಂತ್ರಿ ಅವರು 1952ರ ಸೆಪ್ಟೆಂಬರ್ 29ರಂದು ಕೃಷ್ಣಾ ನದಿ ಆಣೆಕಟ್ಟು ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಿದ ಸಂದರ್ಭದಲ್ಲಿ ಅಂದಿನ ಪ್ರಧಾನ ಮಂತ್ರಿ ಜವಾಹರಲಾಲ ನೆಹರು ನೀಡಿದ ಮಾತುಗಳನ್ನು ಉಲ್ಲೇಖಿಸಿದರು. ಅವರು “ಭಾರತದ ಆಣೆಕಟ್ಟುಗಳು ಈ ನಾಡಿನ ಆಧುನಿಕ ದೇವಾಲಯಗಳಂತಿವೆ” ಎಂದು ಹೇಳಿದ್ದರು — ಈ ದೃಷ್ಟಿಕೋಣವೇ ಭಾರತದ ನೀರಾವರಿ ಅಭಿವೃದ್ಧಿಗೆ ಆಧಾರಸ್ತಂಭವಾಗಿದೆ ಎಂದು ಉಪ ಮುಖ್ಯಮಂತ್ರಿ ಅಭಿಪ್ರಾಯಪಟ್ಟರು.* ‘ನೀರಿನ ಹೆಜ್ಜೆ’ ಕೃತಿ ಕೇವಲ ಇತಿಹಾಸದ ದಾಖಲೆ ಆಗಿಯೇ ಅಲ್ಲ, ಭವಿಷ್ಯದಲ್ಲಿ ಜಲ ಸಂಪನ್ಮೂಲ ನಿರ್ವಹಣೆಗೆ ದಿಕ್ಕುನಿಡುವ ಪಾಠಪುಸ್ತಕವಾಗಲಿದೆ. ಈ ಕೃತಿ ನೀರಿನ ರಾಜಕೀಯ, ವಿಜ್ಞಾನ ಮತ್ತು ಜನಜೀವನದ ನಡುವೆ ನಿರ್ಮಾಣವಾಗುವ ಸಂಬಂಧಗಳ ಕುರಿತಂತೆ ಆಳವಾದ ಒಳನೋಟ ನೀಡುತ್ತದೆ.