➤ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು (NHAI) ಆಂಧ್ರಪ್ರದೇಶದಲ್ಲಿ ನಿರ್ಮಾಣವಾಗುತ್ತಿರುವ ಬೆಂಗಳೂರು–ಕಡಪ–ವಿಜಯವಾಡ ಆರ್ಥಿಕ ಕಾರಿಡಾರ್ (NH-544G) ಯೋಜನೆಯಲ್ಲಿ ಒಟ್ಟು ನಾಲ್ಕು ಗಿನ್ನೆಸ್ ವಿಶ್ವ ದಾಖಲೆಗಳನ್ನು ನಿರ್ಮಿಸುವ ಮೂಲಕ ಜಾಗತಿಕ ಮಟ್ಟದಲ್ಲಿ ಭಾರತದ ತಾಂತ್ರಿಕ ಸಾಮರ್ಥ್ಯವನ್ನು ಸಾಬೀತುಪಡಿಸಿದೆ. ಈ ಕುರಿತು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಮಾಹಿತಿ ಹಂಚಿಕೊಂಡಿದ್ದಾರೆ.  ➤ ಪ್ರಮುಖ ದಾಖಲೆಗಳ ವಿವರ:-1. ಅತಿ ಉದ್ದದ ನಿರಂತರ ಬಿಟುಮಿನಸ್ ಕಾಂಕ್ರೀಟ್ ರಸ್ತೆ: NHAI ಕೇವಲ ಒಂದೇ ಹಂತದಲ್ಲಿ 156 ಕಿಲೋಮೀಟರ್ ಉದ್ದದ ರಸ್ತೆಗೆ ನಿರಂತರವಾಗಿ ಬಿಟುಮಿನಸ್ ಕಾಂಕ್ರೀಟ್ ಹಾಸುವ ಮೂಲಕ ಹೊಸ ಇತಿಹಾಸ ಸೃಷ್ಟಿಸಿದೆ. ಇದು ಈ ಹಿಂದೆ ಇದ್ದ 84.4 ಕಿ.ಮೀ ವಿಶ್ವ ದಾಖಲೆಯನ್ನು ಅಳಿಸಿಹಾಕಿದೆ.2. ಗರಿಷ್ಠ ಪ್ರಮಾಣದ ಕಾಂಕ್ರೀಟ್ ಬಳಕೆ: ಈ ಬೃಹತ್ ಕಾಮಗಾರಿಯಲ್ಲಿ ಒಟ್ಟು 57,500 ಮೆಟ್ರಿಕ್ ಟನ್ ಬಿಟುಮಿನಸ್ ಕಾಂಕ್ರೀಟ್ ಅನ್ನು ಬಳಸಲಾಗಿದೆ. ಇದು ಜಾಗತಿಕವಾಗಿ ಅತಿ ಹೆಚ್ಚು ಪ್ರಮಾಣದ ಕಾಂಕ್ರೀಟ್ ಬಳಕೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.3. 24 ಗಂಟೆಗಳಲ್ಲಿ ಅತಿ ವೇಗದ ಕಾಮಗಾರಿ: ಜನವರಿ 6 ರಂದು ಪುಟ್ಟಪರ್ತಿ ಬಳಿ ಕೇವಲ 24 ಗಂಟೆಗಳಲ್ಲಿ ನಿರಂತರವಾಗಿ 29.95 ಕಿ.ಮೀ ಉದ್ದದ ರಸ್ತೆಯನ್ನು ನಿರ್ಮಿಸುವ ಮೂಲಕ NHAI ಈಗಾಗಲೇ ಎರಡು ವಿಶ್ವ ದಾಖಲೆಗಳನ್ನು ತನ್ನದಾಗಿಸಿಕೊಂಡಿತ್ತು.➤ ಈ ದಾಖಲೆ ಸಾಧನೆ ಆಂಧ್ರಪ್ರದೇಶದ ಪುಟ್ಟಪರ್ತಿ ಸಮೀಪ, ಆರು ಪಥಗಳ ಬೆಂಗಳೂರು–ಕಡಪ–ವಿಜಯವಾಡ ಆರ್ಥಿಕ ಕಾರಿಡಾರ್‌ನ ಪ್ಯಾಕೇಜ್-2 ಮತ್ತು ಪ್ಯಾಕೇಜ್-3 ವಿಭಾಗಗಳಲ್ಲಿ ಸಾಧಿಸಲಾಯಿತು. ಸುಧಾರಿತ ಯಂತ್ರೋಪಕರಣಗಳು, ಬಲವಾದ ಲಾಜಿಸ್ಟಿಕ್ಸ್ ವ್ಯವಸ್ಥೆ, ಕಟ್ಟುನಿಟ್ಟಿನ ಗುಣಮಟ್ಟ ನಿಯಂತ್ರಣ ಹಾಗೂ ಐಐಟಿ ಬಾಂಬೆಯಂತಹ ಪ್ರಮುಖ ತಾಂತ್ರಿಕ ಸಂಸ್ಥೆಗಳ ಬೆಂಬಲ ಈ ಸಾಧನೆಗೆ ಕಾರಣವಾಗಿದೆ ಎಂದು ನಿತಿನ್ ಗಡ್ಕರಿ ತಿಳಿಸಿದ್ದಾರೆ. ➤ ಸ್ಪರ್ಧಾತ್ಮಕ ಪರೀಕ್ಷೆಗಳ ದೃಷ್ಟಿಯಿಂದ ಪ್ರಾಮುಖ್ಯತೆ:=> ಯೋಜನೆಯ ಹೆಸರು: ಬೆಂಗಳೂರು-ಕಡಪ-ವಿಜಯವಾಡ ಆರ್ಥಿಕ ಕಾರಿಡಾರ್ (NH-544G).=> ದಾಖಲೆ ನಿರ್ಮಿಸಿದ ಸಂಸ್ಥೆ: ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI).=> ಸಚಿವಾಲಯ: ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ (ಸಚಿವ: ನಿತಿನ್ ಗಡ್ಕರಿ).