* ನೆದರಲ್ಯಾಂಡ್ಸ್ ದೇಶವು ಇತ್ತೀಚೆಗೆ ತನ್ನ ರಾಜಕೀಯ ಇತಿಹಾಸದಲ್ಲಿ ಮಹತ್ವದ ತಿರುವು ಕಂಡಿದೆ. ದೇಶದ ಪಾರ್ಲಿಮೆಂಟರಿ ರಾಜಕಾರಣದಲ್ಲಿ ಹೊಸ ಯುಗವನ್ನು ಆರಂಭಿಸುವಂತೆ, ರಾಬ್ ಜೆಟನ್ (Rob Jetten) ಅವರನ್ನು ದೇಶದ ಅತ್ಯಂತ ಕಿರಿಯ ಪ್ರಧಾನಮಂತ್ರಿ (Youngest Prime Minister)ಯಾಗಿ ನೇಮಿಸಲಾಗಿದೆ.* ಈ ರಾಜಕೀಯ ಬೆಳವಣಿಗೆ ಯೂರೋಪಿನ ರಾಜಕೀಯ ವಲಯದಲ್ಲಿಯೇ ಚರ್ಚೆಯ ವಿಷಯವಾಗಿದ್ದು, ಯುವ ನಾಯಕತ್ವದ ಹೊಸ ಮಾದರಿ, ಪ್ರಗತಿಶೀಲ ನೀತಿಗಳ ಬಲವರ್ಧನೆ, ಮತ್ತು ಹವಾಮಾನ ಕಾರ್ಯತಂತ್ರಕ್ಕೆ ಹೊಸ ವೇಗ ಎಂದು ಜಾಗತಿಕವಾಗಿ ಗಮನ ಸೆಳೆದಿದೆ.* ರಾಬ್ ಜೆಟನ್ ನೆದರಲ್ಯಾಂಡ್ಸ್‌ನ Democrats 66 (D66) ಪಕ್ಷದ ಪ್ರಮುಖ ನಾಯಕ.ಅವರಿಗೆ ಸಂಸತ್ತಿನ ರಾಜಕಾರಣದಲ್ಲಿ ಯುವ ವಯಸ್ಸಿನಲ್ಲಿಯೇ ಉತ್ತಮ ಅನುಭವವಿದ್ದು, ಸಾರ್ವಜನಿಕ ಜೀವನದಲ್ಲಿ ಪಾರದರ್ಶಕತೆ, ಸಮಾನತೆ, ನವೀಕರಿಸಬಹುದಾದ ಇಂಧನ, ಮತ್ತು ಯುವಕರ ಸಬಲೀಕರಣಕ್ಕೆ ಬಲವಾದ ಧ್ವನಿಯಾಗಿದ್ದಾರೆ.* ಜೆಟನ್ ಅವರ ನೇತೃತ್ವದಲ್ಲಿ ನೆದರಲ್ಯಾಂಡ್ಸ್ ಯೂರೋಪಿನ ಒಕ್ಕೂಟದಲ್ಲಿ (EU) ಹವಾಮಾನ ನಾಯಕತ್ವ ಮಾನವ ಹಕ್ಕುಗಳ ರಕ್ಷಣೆ, ಪ್ರಗತಿಶೀಲ ನೀತಿ ರೂಪಣೆ ,ಇವುಗಳಲ್ಲಿ ಹೆಚ್ಚು ಸಕ್ರಿಯ ಪಾತ್ರವಹಿಸಲು ಸಾಧ್ಯತೆಗಳಿವೆ.* ಜೆಟನ್ ಅವರ ನೇತೃತ್ವದಲ್ಲಿ ನೆದರಲ್ಯಾಂಡ್ಸ್ ಯೂರೋಪಿನ ಒಕ್ಕೂಟದಲ್ಲಿ (EU) ಹವಾಮಾನ ನಾಯಕತ್ವ ಮಾನವ ಹಕ್ಕುಗಳ ರಕ್ಷಣೆ, ಪ್ರಗತಿಶೀಲ ನೀತಿ ರೂಪಣೆ ,ಇವುಗಳಲ್ಲಿ ಹೆಚ್ಚು ಸಕ್ರಿಯ ಪಾತ್ರವಹಿಸಲು ಸಾಧ್ಯತೆಗಳಿವೆ.