* ಈ ವರ್ಷ ಪ್ರಧಾನಿ ನರೇಂದ್ರ ಮೋದಿ ಅವರು ದೀಪಾವಳಿ ಹಬ್ಬವನ್ನು ನೌಕಾ ಪಡೆಯ ಯೋಧರೊಂದಿಗೆ ಆಚರಿಸಿದ್ದಾರೆ.ಇದು ಜನರಿಗೆ ಮನ ಮೆಚ್ಚುವಂತ ಕಾರ್ಯವಾಗಿದೆ.* ಗೋವಾದ ಕರಾವಳಿಯಲ್ಲಿ ಐ ಏನ್ ಎಸ ವಿಕ್ರಾಂತ ಯುದ್ಧ ನೌಕೆಯಲ್ಲಿ ಯೋಧರೊಂದಿಗೆ ಸೌಂವಾದ ನಡೆಸಿದ ಮೋದಿ,ಅವರೊಂದಿಗೆ ದೀಪಾವಳಿ ಹಬ್ಬವನ್ನು ಸಂಭ್ರಮಿಸಿದ್ದಾರೆ.* ಭಾರತೀಯ ನೌಕಾಪಡೆಯ ಅಧಿಕಾರಿಗಳು ಮತ್ತು ನಾವಿಕರು ವಿವಿಧ ದೇಶಭಕ್ತಿ ಗೀತೆಗಳನ್ನು ಹಾಡಿದರು.ಅಲ್ಲಿ ನಡೆದ ರೋಮಾಂಚಕ ಸಾಂಸ್ಕೃತಿಕ ಕಾರ್ಯಕ್ರಮಕ್ಕೂ ಮೋದಿ ಅವರು ಭಾಗವಹಿಸಿ ಸಾಕ್ಷಿಯಾಗಿದ್ದಾರೆ.* ಸ್ವದೇಶೀ ನಿರ್ಮಿತ ಐ ಏನ್ ಎಸ ವಿಕ್ರಾಂತನನ್ನು ( ಯುದ್ಧ ನೌಕೆ ) ದೇಶಕ್ಕೆ ಹಸ್ತಾಂತರಿಸುವಾಗ ವಿಕ್ರಾಂತ ವಿಶಾಲ,ಅಗಾಧ ಮತ್ತು ಭವ್ಯವಾದದ್ದು ಎಂದು ಹೇಳಿದೆ.ಇದು ಕೇವಲ ನೌಕೆ ಯಲ್ಲ 21 ನೇ ಶತಮಾನದಲ್ಲಿ ಭಾರತದ ಕಠಿಣ ಪರಿಶ್ರಮ,ಪ್ರತಿಭೆ,ಸಾಮರ್ಥ್ಯ,ಮತ್ತು ಬದ್ಧತೆಗೆ ಸಾಕ್ಷಿಯಾಗಿದೆ ಎಂದು ಹೇಳಿದ್ದಾರೆ.* ಭಾರತೀಯ ಸಶಸ್ತ್ರ ಪಡೆಗಳ "ಆಪರೇಷನ್ ಸಿಂಧೂರ " ದ ಯಶಸ್ಸನ್ನು ಸ್ಮರಿಸಲು ಅವರು ವಿಶೇಷವಾಗಿ ಬರೆದ ಹಾಡು ಸಹ ಸೇರಿದೆ.ಬಳಿಕ,ಪ್ರಧಾನಿಯು ನೌಕಾಪಡೆಯ ಸಿಬ್ಬಂದಿಯ ಕುಟುಂಬದವರೊಂದಿಗೆ ಊಟ ಸವಿದರು.*ಸೋಮವಾರ ಬೆಳಿಗ್ಗೆ ಮೋದಿ ಐ ಏನ್ ಎಸ ವಿಕ್ರಾಂತನ್ ಡೆಕ ನಲ್ಲಿ ನಡೆದ ಯೋಗಾಸನ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.ಯುದ್ಧ ನೌಕೆಗಳ ಹಾರಾಟವನ್ನು ವೀಕ್ಷಿಸಿದರು,ನೌಕಾಪಡೆಯ ಸಿಬ್ಬಂದಿಗೆ ಸಿಹಿಯನ್ನು ತಿನ್ನಿಸಿದರು.* ಆಪರೇಷನ್ ಸಿಂಧೂರದ ವೇಳೆ ಯೋಧರು ತೋರಿದ ಧೈರ್ಯ,ಸಾಹಸವನ್ನು ಮೋದಿ ಪ್ರಶಂಸಿಸಿದ್ದಾರೆ.ಪ್ರಧಾನಿಯು 2014 ರಿಂದಲೂ ಸಶಸ್ತ್ರ ಪಡೆಗಳೊಂದಿಗೆ ದೀಪಾವಳಿ ಆಚರಿಸುತ್ತಿದ್ದಾರೆ.* ನಾನು ಮಿಲಟರಿ ಉಪಕರಣಗಳನ್ನು ಗಮನಿಸುತ್ತಿದ್ದೆ,ಐ ದೊಡ್ಡ ಹಡಗುಗಳು,ಗಾಳಿಗಿಂತ ವೇಗವಾಗಿ ಚಲಿಸುವ ವಿಮಾನಗಳು,ಜಲ ಅಂತರಗಾಮಿ ನೌಕೆಗಳು ಪ್ರಭಾವಶಾಲಿಯಾಗಿವೆ,ಆದರೆ ಅವುಗಳನ್ನು ನಿಜವಾಗಿಯೂ ಪ್ರಭಾವಶಾಲಿಯಾಗಿಸಿರುವುದು ನಮ್ಮ ಯೋಧರ ಧೈರ್ಯ ಎಂದಿದ್ದಾರೆ.* ಭಾನುವಾರ ಸಂಜೆ ಗೋವಾದ ಕರಾವಳಿಗೆ ಆಗಮಿಸಿದ ಪ್ರಧಾನಿ,ಸ್ವದೇಶೀ ನಿರ್ಮಿತ ಯುದ್ಧ ನೌಕೆಯನ್ನು ಹತ್ತಿದರು.