Job Description: * ಅಕ್ಟೋಬರ್ 21, 2025 ರಂದು, ಗೋವಾದ ಮುಖ್ಯಮಂತ್ರಿ ಡಾ. ಪ್ರಮೋದ್ ಸಾವಂತ್ ಅವರು ರಾಜ್ಯದಲ್ಲಿ ನಡೆಯಲಿರುವ ಪ್ರತಿಷ್ಠಿತ 2025ರ ಫಿಡೆ ವಿಶ್ವಕಪ್ ಚೆಸ್ ಚಾಂಪಿಯನ್‌ಶಿಪ್‌ನ ಅಧಿಕೃತ ಲಾಂಛನ ಮತ್ತು ಚಾಂಪಿಯನ್‌ಶಿಪ್ ಗೀತೆಯನ್ನು ಬಿಡುಗಡೆ ಮಾಡುವ ಮೂಲಕ ಮಹತ್ವದ ಹೆಜ್ಜೆ ಇಟ್ಟಿದ್ದಾರೆ.* ಈ ಮಹತ್ವದ ಚೆಸ್ ವಿಶ್ವಕಪ್ ಅಕ್ಟೋಬರ್ 31 ರಿಂದ ನವೆಂಬರ್ 27, 2025ರವರೆಗೆ ಕರಾವಳಿ ರಾಜ್ಯವಾದ ಗೋವಾದ ಉತ್ತರ ಗೋವಾದ ಅರ್ಪೋರಾ ಗ್ರಾಮದಲ್ಲಿ ನಡೆಯಲಿದೆ.* ಈ ಅಂತರರಾಷ್ಟ್ರೀಯ ಕಾರ್ಯಕ್ರಮದಲ್ಲಿ 82 ದೇಶಗಳಿಂದ ಒಟ್ಟು 206 ಆಟಗಾರರು ಭಾಗವಹಿಸಲಿದ್ದಾರೆ.* ಈ ನಾಕೌಟ್ ಪಂದ್ಯಾವಳಿಯ ಒಟ್ಟು ಬಹುಮಾನದ ಮೊತ್ತವು ಬೃಹತ್ ಮೊತ್ತವಾದ 2 ಮಿಲಿಯನ್ ಅಮೆರಿಕನ್ ಡಾಲರ್ ಆಗಿದೆ.* ಈ ವಿಶ್ವಕಪ್ ಭಾರತಕ್ಕೆ ಮರಳಿ ಬಂದಿರುವುದು ಬರೋಬ್ಬರಿ 23 ವರ್ಷಗಳ ನಂತರ. ಈ ಹಿಂದೆ 2002ರಲ್ಲಿ ಭಾರತದ ಚೆಸ್ ದಂತಕಥೆ ವಿಶ್ವನಾಥನ್ ಆನಂದ್ ಅವರು ಈ ವಿಶ್ವಕಪ್ ಗೆದ್ದಿದ್ದರು.*ವಿಶ್ವ ಚಾಂಪಿಯನ್ ಡಿ. ಗುಕೇಶ್, ಅರ್ಜುನ್ ಎರಿಗೈಸಿ, ಆರ್. ಪ್ರಜ್ಞಾನಂದ, ವಿಧಿತ್ ಗುಜರಾತಿ, ನಿಹಾಲ್ ಸರಿನ್, ಸೇರಿ ಅನೇಕ ಉನ್ನತ ಶ್ರೇಯಾಂಕದ ಭಾರತೀಯ ಆಟಗಾರರು ಸ್ಪರ್ಧಿಸಲಿದ್ದಾರೆ.* 2025ರ ಫಿಡೆ ವಿಶ್ವಕಪ್ ಚೆಸ್ ಚಾಂಪಿಯನ್‌ಶಿಪ್‌ನಲ್ಲಿ ವಿಶ್ವ ಚಾಂಪಿಯನ್ ಡಿ. ಗುಕೇಶ್, ಅರ್ಜುನ್ ಎರಿಗೈಸಿ, ಆರ್. ಪ್ರಜ್ಞಾನಂದ, ವಿಧಿತ್ ಗುಜರಾತಿ, ನಿಹಾಲ್ ಸರಿನ್, ಸೇರಿ ಅನೇಕ ಉನ್ನತ ಶ್ರೇಯಾಂಕದ ಭಾರತೀಯ ಆಟಗಾರರು ಸ್ಪರ್ಧಿಸಲಿದ್ದಾರೆ.ಅನಿಶ್ ಗಿರಿ, ವೆಸ್ಲಿ ಸೋ, ವಿನ್ಸೆಂಟ್ ಕೇಮರ್, ಹ್ಯಾನ್ಸ್ ನೀಮನ್, ನೋದಿರ್ಬೆಕ್ ಅಬ್ದುಸತ್ತೋರೊವ್, ಇಯಾನ್ ನೆಪೋಮ್ನಿಯಾಚ್ಟಿ, ರಿಚರ್ಡ್ ರಾಪೋರ್ಟ್ ಮುಂತಾದ ವಿಶ್ವದ ಅಗ್ರಮಾನ್ಯ ಚೆಸ್ ತಾರೆಗಳು ಪ್ರಶಸ್ತಿಗಾಗಿ ಹೋರಾಡಲಿದ್ದಾರೆ.* ಅರ್ಜೆಂಟೀನಾದ 12 ವರ್ಷದ ಫೌಸ್ಟಿನೊ ಓರೊ (Faustino Oro) ಅವರು ಈ 2025ರ ಆವೃತ್ತಿಯಲ್ಲಿ ಭಾಗವಹಿಸುತ್ತಿರುವ ಅತ್ಯಂತ ಕಿರಿಯ ಸ್ಪರ್ಧಿಯಾಗಿ ಇತಿಹಾಸ ನಿರ್ಮಿಸಲಿದ್ದಾರೆ.* ಭಾರತದ ಉದಯೋನ್ಮುಖ ತಾರೆ ಹಾಗೂ ಮಹಿಳಾ ವಿಶ್ವಕಪ್ ವಿಜೇತೆ ದಿವ್ಯಾ ದೇಶ್‌ಮುಖ್ ಅವರು ವೈಲ್ಡ್ ಕಾರ್ಡ್ ಮೂಲಕ ಓಪನ್ ವಿಭಾಗಕ್ಕೆ ಪ್ರವೇಶ ಪಡೆದಿದ್ದಾರೆ.ಲಾಂಛನ ಮತ್ತು ಗೀತೆಯ ವಿಶೇಷತೆಲಾಂಛನ: ಬಿಡುಗಡೆ ಮಾಡಿದ ಲಾಂಛನವು ಗೋವಾದ ಸಂಸ್ಕೃತಿ ಮತ್ತು ಚೆಸ್‌ನ ತಂತ್ರಗಾರಿಕೆಯ ಮನೋಭಾವವನ್ನು ಪ್ರತಿಬಿಂಬಿಸುತ್ತದೆ.ಚಾಂಪಿಯನ್‌ಶಿಪ್ ಗೀತೆ: ಈ ಗೀತೆಯನ್ನು ಪ್ರಸಿದ್ಧ ಗಾಯಕ ದಲೇರ್ ಮೆಹಂದಿ ಹಾಡಿದ್ದಾರೆ.