Job Description: ➤ ಭಾರತ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು 1973 ರಲ್ಲಿ ಸ್ಥಾಪಿಸಿದ 'ರಾಷ್ಟ್ರೀಯ ಫ್ಲಾರೆನ್ಸ್ ನೈಟಿಂಗೇಲ್ ಪ್ರಶಸ್ತಿ' (National Florence Nightingale Awards) ಯು ನರ್ಸಿಂಗ್ ಕ್ಷೇತ್ರದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ದಾದಿಯರನ್ನು ಗೌರವಿಸಲು ನೀಡಲಾಗುವ ದೇಶದ ಅತ್ಯುನ್ನತ ಪುರಸ್ಕಾರವಾಗಿದೆ. ಈ ವರ್ಷದ ಪ್ರಶಸ್ತಿ ಪ್ರದಾನ ಸಮಾರಂಭವು 2026ರ ಮೇ 12ರಂದು (ಅಂತರಾಷ್ಟ್ರೀಯ ನರ್ಸಸ್ ದಿನದ ಅಂಗವಾಗಿ) ರಾಷ್ಟ್ರಪತಿ ಭವನದಲ್ಲಿ ನಡೆದಿದ್ದು, ಗೌರವಾನ್ವಿತ ರಾಷ್ಟ್ರಪತಿಗಳಾದ ಶ್ರೀಮತಿ ದ್ರೌಪದಿ ಮುರ್ಮು ಅವರು ದೇಶಾದ್ಯಂತ ಒಟ್ಟು 15 ಮಂದಿ ನಿಸ್ವಾರ್ಥ ಸೇವೆ ಸಲ್ಲಿಸಿದ ಶುಶ್ರೂಷಕರಿಗೆ (Nurses) ಈ ಪ್ರಶಸ್ತಿಯನ್ನು ನೀಡಿ ಗೌರವಿಸಿದರು. ಸಮಾಜಕ್ಕೆ ನರ್ಸಿಂಗ್ ವೃತ್ತಿಪರರು ನೀಡುತ್ತಿರುವ ಅಸಾಧಾರಣ ಕಾರ್ಯಕ್ಷಮತೆಯನ್ನು ಗುರುತಿಸುವುದು ಈ ಪ್ರಶಸ್ತಿಯ ಪ್ರಮುಖ ಉದ್ದೇಶವಾಗಿದೆ.➤ ಪ್ರಶಸ್ತಿಯ ಸ್ವರೂಪ: ಈ ಪ್ರಶಸ್ತಿಯು 50,000 ರೂಪಾಯಿ ನಗದು, ಪ್ರಮಾಣಪತ್ರ ಮತ್ತು ಪದಕವನ್ನು ಒಳಗೊಂಡಿರುತ್ತದೆ. ಈ ಪ್ರಶಸ್ತಿಯನ್ನು ಪ್ರಮುಖವಾಗಿ ಮೂರು ವಿಭಾಗಗಳಲ್ಲಿ ನೀಡಲಾಗುತ್ತದೆ:1.ನರ್ಸ್ (Registered Nurse)2.ಆಕ್ಸಿಲಿಯರಿ ನರ್ಸ್ ಮಿಡ್‌ವೈಫ್ (ANM)3.ಲೇಡಿ ಹೆಲ್ತ್ ವಿಸಿಟರ್ (LHV)➤ ಫ್ಲಾರೆನ್ಸ್ ನೈಟಿಂಗೇಲ್ : ಈ ಪ್ರಶಸ್ತಿಯನ್ನು ಆಧುನಿಕ ನರ್ಸಿಂಗ್‌ನ ಪಿತಾಮಹಿ ಎಂದು ಕರೆಯಲ್ಪಡುವ ಫ್ಲಾರೆನ್ಸ್ ನೈಟಿಂಗೇಲ್ ಅವರ ನೆನಪಿಗಾಗಿ ನೀಡಲಾಗುತ್ತದೆ. ಅವರನ್ನು ಲೇಡಿ ವಿತ್ ದಿ ಲ್ಯಾಂಪ್ ಎಂದು ಕೂಡ ಕರೆಯಲಾಗುತ್ತದೆ.➤ 2026ನೇ ಸಾಲಿನ ರಾಷ್ಟ್ರೀಯ ಫ್ಲಾರೆನ್ಸ್ ನೈಟಿಂಗೇಲ್ ಪ್ರಶಸ್ತಿ ಪಡೆದ 15 ಸಾಧಕರ ಪಟ್ಟಿ ಇಲ್ಲಿದೆ. ವಿಶೇಷವೆಂದರೆ, ನಮ್ಮ ಕರ್ನಾಟಕದ ಶ್ರೀಮತಿ ಕವಿತಾ ಜಗನ್ನಾಥ್ ಅವರು ಕೂಡ ಈ ಗೌರವಕ್ಕೆ ಪಾತ್ರರಾಗಿದ್ದಾರೆ.