* ನೂತನ ಸಂಸತ್ ಭವನದಲ್ಲಿ ಅಧಿವೇಶನ ಆರಂಭವಾದ ಮೊದಲ ದಿನವೇ ಸ್ತ್ರೀ ಸಬಲೀಕರಣದತ್ತ ದೊಡ್ಡ ಹೆಜ್ಜೆ ಇಡಲಾಗಿದು, ಮಹಿಳಾ ಮೀಸಲು ಮಸೂದೆಯನ್ನು ಸರ್ವಾನುಮತದಿಂದ ಅಂಗೀಕರಿಸಿ ಎಂದು ಪ್ರಧಾನಿ ನರೇಂದ್ರ ಮೋದಿ ಎಲ್ಲ ಸಂಸದರಿಗೆ ಮನವಿ ಮಾಡಿದರು. * ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಶೇಕಡ 33 ಮೀಸಲಾತಿ ಕಲ್ಪಿಸುವ ಮೂಲಕ ಮಹಿಳೆಯರ ಭಾಗವಹಿಸುವಿಕೆಯನ್ನು ವಿಸ್ತರಿಸುವ ಗುರಿಹೊಂದಿರುವ ‘ನಾರಿ ಶಕ್ತಿ ವಂದನ್ ಅಧಿನಿಯಮ್ಅನ್ನು ಒಂದು ಕಾನೂನಾಗಿ ರೂಪಿಸುವುದನ್ನು ಖಾತರಿಪಡಿಸಲು ತಮ್ಮ ಸರ್ಕಾರ ಬದ್ಧವಾಗಿದೆ ಎಂದು ಮೋದಿ ಹೇಳಿದರು.* ಸಪ್ಟೆಂಬರ್ 25 ರಂದು ನಡೆದ ಸಚಿವ ಸಂಪುಟ ಸಭೆ, ಮಹಿಳಾ ಮೀಸಲಾತಿ ಮಸೂದೆಗೆ ಅನುಮೋದನೆ ನೀಡಿದೆ. * ಪ್ರಜಾಪ್ರಭುತ್ವವನ್ನು ಬಲಪಡಿಸುತ್ತದೆ ಎಂದು ಅವರು ಪ್ರತಿಪಾದಿಸಿದರು. ‘ಮಹಿಳಾ ಮೀಸಲಾತಿ ಕುರಿತು ಅನೇಕ ವರ್ಷಗಳಿಂದ ಹಲವು ಚರ್ಚೆಗಳು ನಡೆದಿವೆ ಮತ್ತು ವಿವಾದಗಳು ಹುಟ್ಟಿಕೊಂಡಿವೆ. * ಮಹಿಳಾ ಮೀಸಲಾತಿ ಬಗ್ಗೆ ಈ ಹಿಂದೆಯೂ ಸಂಸತ್ತಿನಲ್ಲಿ ಪ್ರಯತ್ನಗಳು ನಡೆದಿವೆ. 1996ರಲ್ಲಿ ಇದಕ್ಕೆ ಸಂಬಂಧಿಸಿದ ಮೊದಲ ಮಸೂದೆಯನ್ನು ಮಂಡಿಸಲಾಗಿತ್ತು ಎಂದು ಮೋದಿ ಹೇಳಿದರು. * ಅಟಲ್ ಬಿಹಾರಿ ವಾಜಪೇಯಿ ಪ್ರಧಾನಿಯಾಗಿದ್ದಾಗ ಅನೇಕ ಬಾರಿ ಮಹಿಳಾ ಮೀಸಲಾತಿ ಮಸೂದೆಯನ್ನು ಮಂಡಿಸಲಾಗಿದ್ದು ಅಗತ್ಯ ಬೆಂಬಲ ಕ್ರೋಡೀಕರಿಸಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಆ ಕನಸು ಇದುವರೆಗೆ ಕನಸಾಗಿಯೇ ಉಳಿದಿದೆ ಎಂದೂ ಮೋದಿ ಹೇಳಿದರು.