* ಕನ್ನಡ ಸಾಹಿತ್ಯ ಪರಿಷತ್ತು ನೀಡುವ 2023ನೇ ಸಾಲಿನ 'ಫಾಧರ್ ಚಸರಾ ಕನ್ನಡ ಸಂಸ್ಕೃತಿ ದತ್ತಿ ಪ್ರಶಸ್ತಿ'ಗೆ ಸಾಹಿತಿ ನಾ.ಡಿಸೋಜ ಮತ್ತು ಕನ್ನಡ ಪರ ಹೋರಾಟಗಾರ್ತಿ ದು. ಸರಸ್ವತಿ ಹಾಗೂ ಕನ್ನಡ ಚಳುವಳಿ ವೀರಸೇನಾನಿ ಮ.ರಾಮಮೂರ್ತಿ ಅವರು ಪ್ರಶಸ್ತಿ ಗೌರವಕ್ಕೆ ಆಯ್ಕೆಯಾಗಿದ್ದಾರೆ.* ಈ ಪ್ರಶಸ್ತಿಯು ತಲಾ ₹10 ಸಾವಿರ ನಗದು ಬಹುಮಾನವನ್ನು ಒಳಗೊಂಡಿದೆ.* ಪ್ರತಿ ವರ್ಷ ಕನ್ನಡ ಕ್ರೈಸ್ತ ಸಾಧಕರೊಬ್ಬರು ಹಾಗೂ ಕನ್ನಡ ಪರ ಹೋರಾಟಗಳಲ್ಲಿ ಸಕ್ರಿಯವಾಗಿ ಇರುವ ಒಬ್ಬರಿಗೆ 'ದತ್ತಿ ಪ್ರಶಸ್ತಿ'ಯನ್ನು ನೀಡಿ ಗೌರವಿಸಲಾಗುತ್ತದೆ.* 43 ಜನ ಸದಸ್ಯರು ಪಾಲ್ಗೊಂಡಿದ್ದ ಸಭೆಯಲ್ಲಿ ಯಾವುದೇ ಅಪಸ್ವರವಿಲ್ಲದೇ ಎಲ್ಲರೂ ನಾ. ಡಿಸೋಜ ಅವರ ಆಯ್ಕೆಗೆ ಸಮ್ಮತ ವ್ಯಕ್ತಪಡಿಸಿದರು.