* ಬಾಂಗ್ಲಾದೇಶ ಕ್ರಿಕೆಟ್‌ ತಂಡದ ಆಟಗಾರ ತಮೀಮ್ ಇಕ್ಬಾಲ್ ಅವರು ಜುಲೈ 06 ರಂದು (ಗುರುವಾರ) ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿಯನ್ನು ಘೋಷಿಸಿದ್ದಾರೆ. * ತಮೀಮ್ ಅವರು 241 ಏಕದಿನ ಪಂದ್ಯಗಳನ್ನಾಡಿ 8,133 ರನ್ ಕಲೆ ಹಾಕಿದ್ದು, 70 ಟೆಸ್ಟ್ ಗಳ 134 ಇನ್ನಿಂಗ್ಸ್ ಗಳಿಂದ 5,134 ರನ್ ಶೇಖರಿಸಿರುವ ಅವರು 10 ಶತಕಗಳನ್ನು ಗಳಿಸಿದ್ದಾರೆ.* 2007ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಎಡಗೈ ಬ್ಯಾಟರ್‌ ತಮಿಮ್‌ ಇಕ್ಬಾಲ್‌ ಅವರು 2007ರಲ್ಲಿ ವೆಸ್ಟ್‌ ಇಂಡೀಸ್‌ನಲ್ಲಿ ನಡೆದ ಐಸಿಸಿ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯ ಲೀಗ್‌ ಹಂತದಲ್ಲಿ ಟೀಮ್ ಇಂಡಿಯಾ ಎದುರು ಬಾಂಗ್ಲಾದೇಶ ತಂಡಕ್ಕೆ ಐತಿಹಾಸಿಕ ಕೊಡುಗೆ ನೀಡಿದ್ದರು.