* ಮಧುರೈ -ಬೆಂಗಳೂರು ಸೇರಿದಂತೆ ಮೂರು ವಂದೇ ಭಾರತ್ ರೈಲುಗಳ ಸಂಚಾರಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಸ್ಟ್ 31ರಂದು ಚಾಲನೆ ನೀಡಿದ್ದಾರೆ. ವಿಡಿಯೊ ಕಾನ್ಫರೆನ್ಸ್ ಮೂಲಕ ವಂದೇ ಭಾರತ್ ರೈಲುಗಳ ಸಂಚಾರಕ್ಕೆ ಪ್ರಧಾನಿ ಹಸಿರು ನಿಶಾನೆ ತೋರಿದ್ದಾರೆ.* ಹೊಸ ವಂದೇ ಭಾರತ್ ರೈಲುಗಳು ಈ ಪ್ರದೇಶದ ಜನರಿಗೆ ವೇಗ ಮತ್ತು ಸೌಕರ್ಯದೊಂದಿಗೆ ಪ್ರಯಾಣಿಸಲು ವಿಶ್ವದರ್ಜೆಯ ಸಾಧನಗಳನ್ನು ಒದಗಿಸುತ್ತವೆ ಮತ್ತು ಉತ್ತರ ಪ್ರದೇಶ, ತಮಿಳುನಾಡು ಮತ್ತು ಕರ್ನಾಟಕ ಮೂರು ರಾಜ್ಯಗಳಿಗೆ ಸೇವೆಯನ್ನು ಪೂರೈಸಲಿವೆ. ಎಂದು ಸರ್ಕಾರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.* ಈ “ವಂದೇ ಭಾರತ್ ಎಕ್ಸ್‌ಪ್ರೆಸ್ ಮೂರು ಮಾರ್ಗಗಳಲ್ಲಿ ಸಂಪರ್ಕವನ್ನು ಸುಧಾರಿಸುತ್ತದೆ:ಮೀರತ್-ಲಕ್ನೋ, ಮಧುರೈ-ಬೆಂಗಳೂರು ಮತ್ತು ಚೆನ್ನೈ-ನಾಗರಕೋಯಿಲ್”.* ಮೀರತ್ -ಲಕ್ನೋ ವಂದೇ ಭಾರತ್ ಎರಡು ನಗರಗಳ ನಡುವಿನ ಪ್ರಸ್ತುತ ವೇಗದ ರೈಲಿಗೆ ಹೋಲಿಸಿದರೆ ಪ್ರಯಾಣಿಕರಿಗೆ ಸುಮಾರು 1 ಗಂಟೆ ಉಳಿಸಲು ಸಹಾಯ ಮಾಡುತ್ತದೆ.* ಚೆನ್ನೈ-ನಾಗರ್‌ಕೋಯಿಲ್ ವಂದೇ ಭಾರತ್ ರೈಲು ಎರಡು ನಗರಗಳ ನಡುವಿನ ಪ್ರಯಾಣವನ್ನು 2 ಗಂಟೆಗಳಿಗಿಂತ ಹೆಚ್ಚು ಉಳಿಸುತ್ತದೆ.* ಮಧುರೈ-ಬೆಂಗಳೂರು(ರೈಲು ನಂ. 20671/20672) ವಂದೇ ಭಾರತ್ ರೈಲು ಎರಡು ನಗರಗಳ ನಡುವಿನ ಪ್ರಯಾಣವನ್ನು ಸುಮಾರು 1 ಗಂಟೆ 30 ನಿಮಿಷಗಳನ್ನು ಉಳಿಸುತ್ತದೆ.