* ಪ್ರಧಾನ ಮಂತ್ರಿ ಮುದ್ರಾ ಯೋಜನೆ (PMMY) ಏಪ್ರಿಲ್ 8, 2015 ರಂದು ಗೌರವಾನ್ವಿತ ಪ್ರಧಾನ ಮಂತ್ರಿಗಳಿಂದ ಸಾಲವನ್ನು ಒದಗಿಸುವ ಯೋಜನೆಯಾಗಿದೆ. * ಮುದ್ರಾ ಯೋಜನೆಯಡಿ ಸಾಲ ಮಂಜೂರು ಮತ್ತು ವಿತರಣೆಯಲ್ಲಿ ಕರ್ನಾಟಕ ರಾಜ್ಯವು ದೇಶದಲ್ಲಿಯೇ ಮೂರನೇ ಸ್ಥಾನದಲ್ಲಿದೆ.* ಪಿಎಂ ಸ್ವಾನಿಧಿ ಯೋಜನೆಯ ವಿಷಯದಲ್ಲಿ 5ನೇ ಸ್ಥಾನ ಪಡೆದುಕೊಂಡಿದೆ ಎಂದು ರಾಜ್ಯ ಮಟ್ಟದ ಬ್ಯಾಂಕರುಗಳ ಸಮಿತಿಯ ಕ್ರಮ (SLBC) 2023ರ ಸೆಪ್ಟೆಂಬರ್ ತ್ರೈಮಾಸಿಕದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಂಚಾಲಕ ಮತ್ತು ಕೆನರಾ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಎಂ. ಭಾಸ್ಕರ್ ಚಕ್ರವರ್ತಿ ಅವರು ತಿಳಿಸಿದ್ದಾರೆ.* ಎಸ್ ಎಲ್ ಬಿಸಿ 2023ರ ತ್ರೈಮಾಸಿಕದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿದ್ದ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್ ಅವರು ಬರದಿಂದ (ನೈಸರ್ಗಿಕ ವಿಕೋಪ) ತೊಂದರೆಗೆ ಒಳಗಾಗಿರುವ ಎಲ್ಲ ರೈತರಿಗೂ ಪರಿಹಾರ ಕ್ರಮಗಳು ತಲುಪಬೇಕು. ಬ್ಯಾಂಕ್‌ಗಳು ಜಾಗೃತಿ ಶಿಬಿರಗಳನ್ನು ಆಯೋಜಿಸಬೇಕು ಮತ್ತು ನಿಗದಿತ ದಿನಾಂಕದೊಳಗೆ ಎಲ್ಲ ಸಾಲಗಳನ್ನು ಕಟ್‌ಆಫ್ ಅರ್ಹ ಮರುಹೊಂದಿಸಬೇಕು ಎಂದು ಸಲಹೆ ನೀಡಿದ್ದಾರೆ.