* ಬಜೆಟ್ ವೇಳೆ ಘೋಷಿಸಲಾದಂತೆ ಪಿಎಂ ಮುದ್ರಾ ಯೋಜನೆಯಲ್ಲಿ ಸಾಲದ ಮಿತಿಯನ್ನು 10 ಲಕ್ಷ ರೂನಿಂದ 20 ಲಕ್ಷ ರೂಗೆ ಹೆಚ್ಚಿಸಲಾಗಿದೆ. ಹಣಕಾಸು ಸಚಿವಾಲಯ ಶುಕ್ರವಾರ (ಅಕ್ಟೋಬರ್ 26) ಸಾಲದ ಮಿತಿ ಹೆಚ್ಚಳವನ್ನು ಪ್ರಕಟಿಸಿದೆ. * ದೇಶದಲ್ಲಿ ಸಣ್ಣ ಉದ್ದಿಮೆಗಳಿಗೆ ಪ್ರೋತ್ಸಾಹಿಸಲೆಂದು ಮುದ್ರಾ ಯೋಜನೆ ಅಡಿ ಸರ್ಕಾರ ಸಾಲ ಒದಗಿಸುತ್ತಿದೆ. ಕ್ರೆಡಿಟ್ ಗ್ಯಾರಂಟಿ ಫಂಡ್ (CGFMU) ಅಡಿಯಲ್ಲಿ 20 ಲಕ್ಷ ರೂವರೆಗೂ ಮುದ್ರಾ ಸಾಲ ನೀಡಲಾಗುತ್ತಿದೆ.* ಪಿಎಂ ಮುದ್ರಾ ಯೋಜನೆ ಅಡಿಯಲ್ಲಿ ತರುಣ್ ಪ್ಲಸ್ ಎನ್ನುವ ಹೊಸ ವಿಭಾಗ ಮಾಡಲಾಗಿದೆ. ಈವರೆಗೂ ಶಿಶು, ಕಿಶೋರ ಮತ್ತು ತರುಣ್ ಎಂಬ ವಿಭಾಗಗಳಿದ್ದವು. ಶಿಶು ವಿಭಾಗದಲ್ಲಿ 50,000 ರೂವರೆಗೂ ಸಾಲ ಸಿಗುತ್ತದೆ. ಕಿಶೋರ್ ವಿಭಾಗದಲ್ಲಿ 5 ಲಕ್ಷ ರೂವರೆಗೂ ಸಾಲದ ಅವಕಾಶ ಇರುತ್ತದೆ. ತರುಣ್ ವಿಭಾಗದಲ್ಲಿ ಐದರಿಂದ ಹತ್ತು ಲಕ್ಷ ರೂವರೆಗೂ ಸಾಲ ಸೌಲಭ್ಯ ಇರುತ್ತದೆ. ಈಗ ತರುಣ್ ಪ್ಲಸ್ ವಿಭಾಗವನ್ನು ಸೇರಿಸಲಾಗಿದ್ದು, 10 ಲಕ್ಷ ಮೇಲ್ಪಟ್ಟ ಮತ್ತು 20 ಲಕ್ಷ ರೂವರೆಗೆ ಸಾಲ ಕೊಡಲಾಗುತ್ತದೆ.* ತರುಣ್ ವಿಭಾಗದಲ್ಲಿ ಸಾಲ ಪಡೆದು ಅದನ್ನು ಸರಿಯಾದ ಸಮಯಕ್ಕೆ ತೀರಿಸಿದವರಿಗೆ ತರುಣ್ ಪ್ಲಸ್ ವಿಭಾಗದಲ್ಲಿ 20 ಲಕ್ಷ ರೂವರೆಗೆ ಸಾಲದ ಅವಕಾಶ ಸಿಗುತ್ತದೆ.* ನರೇಂದ್ರ ಮೋದಿ ನೇತೃತ್ವದ ಮೊದಲ ಎನ್ಡಿಎ ಸರ್ಕಾರದಲ್ಲಿ ತೆಗೆದುಕೊಂಡು ಹಲವು ಯೋಜನೆಗಳಲ್ಲಿ ಪಿಎಂ ಮುದ್ರಾ ಸ್ಕೀಮ್ ಕೂಡ ಒಂದು.* 2015ರ ಏಪ್ರಿಲ್ 8ರಂದು ಪಿಎಂಎಂವೈ ಆರಂಭವಾಯಿತು. ಕಾರ್ಪೊರೇಟ್ ಅಲ್ಲ, ಕೃಷಿ ಅಲ್ಲದ ಸಣ್ಣ ಉದ್ದಿಮೆಗಳಿಗೆ ಉತ್ತೇಜನ ನೀಡಲು ಸುಲಭ ಸಾಲ ನೀಡುವ ಯೋಜನೆಯಾಗಿದೆ.* ಯಾವುದೇ ಅನುಮಾನ ಇಲ್ಲದೇ ಸಾಲ ನೀಡಲಾಗುತ್ತದೆ. ಪಡೆದ ಸಾಲವನ್ನು ಸರಿಯಾಗಿ ತೀರಿಸಿದವರಿಗೆ ಇನ್ನಷ್ಟು ಹೆಚ್ಚಿನ ಸಾಲ ಪಡೆಯುವ ಅವಕಾಶವನ್ನೂ ಈ ಸ್ಕೀಮ್ನಲ್ಲಿ ಕೊಡಲಾಗಿದೆ.* ಇದುವರೆಗೂ 41 ಕೋಟಿಗೂ ಅಧಿಕ ಖಾತೆಗಳಿಗೆ ಒಟ್ಟಾರೆ 2,14,364.71 ಕೋಟಿ ರೂ ಮೊತ್ತದ ಸಾಲದ ಹಣವನ್ನು ವಿತರಿಸಲಾಗಿದೆ. ಈ 41 ಕೋಟಿ ಅಕೌಂಟ್ಗಳಲ್ಲಿ ಶೇ. 68ರಷ್ಟವು ಮಹಿಳಾ ಉದ್ದಿಮೆದಾರರಿಗೆ ಸೇರಿವೆ. ಶೇ. 51ರಷ್ಟು ಮಂದಿ ಫಲಾನುಭವಿಗಳು ಹಿಂದುಳಿದ ಸಮುದಾಯಗಳಿಗೆ ಸೇರಿದವರಾಗಿದ್ದಾರೆ.