* ಮಧ್ಯ ಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನಕ್ಕೆ ಎರಡು ಹೆಣ್ಣು ಚೀತಾಗಳು ಮತ್ತು 5 ಗಂಡು ಚೀತಾಗಳು ಸೇರಿ ಒಟ್ಟು ಏಳು ಚೀತಾಗಳನ್ನು ಜೂನ್ ಮೂರನೇ ವಾರದಲ್ಲಿ ತಂದು ಬಿಡಲಾಗುವುದು ಎಂದು ಚೀತಾ ಮರುಷರಿಚಯ ಯೋಜನೆಯ ಮೇಲ್ವಿಚಾರಣೆಗೆ ನೇಮಿಸಲಾಗಿರುವ ಉನ್ನತ ಮಟ್ಟದ ಸಮಿತಿಯ ಮುಖ್ಯಸ್ಥರು ತಿಳಿಸಿದರು.* ನಮೀಬಿಯಾದಿಂದ ಭಾರತಕ್ಕೆ ತರಲಾಗುತ್ತಿರುವ ಎರಡನೇ ಬ್ಯಾಚ್‌ನ ಚೀತಾಗಳು ಇವಾಗಿವೆ. ಮೊದಲನೇ ಬ್ಯಾಚ್‌ನ 12 ಚೀತಾಗಳನ್ನು ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಕುನೊ ಉದ್ಯಾನಕ್ಕೆ ಬಿಡಲಾಗಿತ್ತು.