* ಪ್ರಧಾನಿ ನರೇಂದ್ರ ಮೋದಿಯವರ ಕುರಿತು ಸಂಶೋಧನಾ ಮಹಾ ಪ್ರಬಂಧ ಮಂಡಿಸಿದ ಮುಸ್ಲಿಂ ಸಂಶೋಧಕಿ ನಜ್ಮಾ ಫರ್ವೀನ್ ಬನಾರಸ್ ಹಿಂದೂ ವಿಶ್ವ ವಿದ್ಯಾಲಯದಿಂದ ಪಿಹೆಚ್‌ಡಿ ಪದವಿ ಪಡೆದುಕೊಂಡಿದ್ದಾರೆ.* ವಾರಣಾಸಿಯ ಲಲ್ಲಾಪುರ ನಿವಾಸಿಯಾಗಿರುವ ನಜ್ಮಾ ಫರ್ವೀನ್, ಬನಾರಸ್‌ ಹಿಂದೂ ವಿವಿಯಲ್ಲಿ ರಾಜ್ಯಶಾಸ್ತ್ರ ವಿಭಾಗದಲ್ಲಿ ಸಂಶೋಧನೆ ನಡೆಸಿದ್ದು, ‘ನರೇಂದ್ರ ಮೋದಿಯವರ ರಾಜಕೀಯ ನಾಯಕತ್ವ : ಒಂದು ವಿಶ್ಲೇಷಣಾತ್ಮ ಅಧ್ಯಯನ’ ಎಂಬ ವಿಷಯದಲ್ಲಿ ಪ್ರಬಂಧ ಮಂಡಿಸಿ ಪಿಹೆಚ್‌ಡಿ ಪದವಿ ಪಡೆದಿದ್ದಾರೆ. * ಈ ಮೂಲಕ ಮೋದಿ ಕುರಿತು ಸಂಶೋಧನೆ ನಡೆಸಿದ ದೇಶದ ಮೊದಲ ಮುಸ್ಲಿಂ ಮಹಿಳೆ ಎನಿಸಿಕೊಂಡಿದ್ದಾರೆ. ತನ್ನ ಸಂಶೋಧನೆಯಲ್ಲಿ ಫರ್ವೀನ್ ಮೋದಿಯವರನ್ನು ‘ಮೆಗಾಸ್ಟಾರ್‌’ ಎಂದು ಬಣ್ಣಿಸಿರುವುದಾಗಿ ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.