* ಮೋಚಾ ಚಂಡಮಾರುತದ ಸಂಭವನೀಯ ಹನಿ ತಗ್ಗಿಸಲು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಪಶ್ಚಿಮ ಬಂಗಾಳ ಸರಕಾರ ತೆಗೆದುಕೊಂಡಿದೆ. ಕರಾವಳಿ ತೀರದ ಮತ್ತು ತಗ್ಗುಪ್ರದೇಶಗಳ ಜನವನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.* ಮೂರು ದಿನ ಸಮುದ್ರಕ್ಕೆ ಇಳಿಯದಂತೆ ಮೀನುಗಾರರು ಮತ್ತು ಪ್ರವಾಸಿಗರಿಗೆ ಎಚ್ಚರಿಕೆ ನೀಡಲಾಗಿದೆ. * ಹೆಚ್ಚು ಪ್ರವಾಸಿಗರು ಭೇಟಿ ನೀಡುವ ದಿಘಾ, ಶಂಕರಾಪುರ, ಬಖ್ಯಾಳಿ ಪ್ರದೇಶಗಳಿಗೆ ಈಗಾಗಲೇ ವಿಪತ್ತು ನಿರ್ವಹಣಾ ತಂಡಗಳು, ಸ್ವಯಂ ಸೇವಕರು ತಲುಪಿದ್ದಾರೆ.*  ಮೋಚಾ ಚಂಡಮಾರುತವು ಬಾಂಗ್ಲಾದೇಶ ಮಯನ್ಮಾರ್ ಗಡಿಯನ್ನು ಅಪ್ಪಳಿಸುವ ನಿರೀಕ್ಷೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.