* ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯವು 2023 ರ ಪ್ರಶಸ್ತಿಗಳನ್ನು ಪ್ರಕಟಿಸಿದೆ. ಟೀಂ ಇಂಡಿಯಾದ ವೇಗದ ಬೌಲ‌ರ್ ಮೊಹಮ್ಮದ್ ಶಮಿ (Mohammed Shami) ಸೇರಿದಂತೆ 26 ಅಥ್ಲೆಟ್ ಗಳು ಅರ್ಜುನ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಹಾಗೆಯೇ ಬ್ಯಾಡ್ಮಿಂಟನ್ ಸ್ಟಾರ್ ಜೋಡಿ ಚಿರಾಗ್ ಶೆಟ್ಟಿ ಮತ್ತು ಮತ್ತು ಸಾತ್ವಿಕ ಸಾಯಿರಾಜ್ ಅವರು ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.*  ಎಲ್ಲ ಕ್ರೀಡಾಪಟುಗಳಿಗೆ ಪ್ರಶಸ್ತಿಯನ್ನು 9 ಜನೆವರಿ 2023ರಂದು ನಡೆಯುವ ಸಮಾರಂಭದಲ್ಲಿ ರಾಷ್ಟ್ರಪತಿಯವರು ಈ ಪ್ರಶಸ್ತಿಗಳನ್ನು ಪ್ರಧಾನ ಮಾಡಲಿದ್ದಾರೆ. * ಪ್ರಶಸ್ತಿಗಳಿಗೆ ಆಯ್ಕೆಯಾದವರ ವಿವರ : - 2023ರ ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿ: ಚಿರಾಗ್ ಶೆಟ್ಟಿ ಮತ್ತು ಸಾತ್ವಿಕ್ ಸಾಯಿರಾಜ್ - ಅರ್ಜುನ ಪ್ರಶಸ್ತಿಗಳು: ಓಜಸ್ ಪ್ರವೀಣ್ ದಿಯೋಟಲೆ (ಆರ್ಚರಿ), ಅದಿತಿ ಗೋಪಿಚಂದ್ ಸ್ಮಾಮಿ (ಆರ್ಚರಿ), ಮುರಳಿ ಶ್ರೀಶಂಕರ್ (ಅಥ್ಲೆಟಿಕ್ಸ್), ಪಾರುಲ್ ಚೌಧರಿ (ಅಥ್ಲೆಟಿಕ್ಸ್), ಮೊಹಮ್ಮದ್ ಹುಸಾಮುದ್ದೀನ್ (ಬಾಕ್ಸಿಂಗ್), ಆ‌ರ್.ವೈಶಾಲಿ (ಚೆಸ್), ಮೊಹಮ್ಮದ್ ಶಮಿ (ಕ್ರಿಕೆಟ್), ಅನುಷ್ ಅಗರವಾಲ್ ( ಕುದುರೆ ಸವಾರಿ), ದಿವ್ಯಾಕೃತಿ ಸಿಂಗ್ (ಕುದುರೆ ಸವಾರಿ), ದೀಕ್ಷಾ ದಾಗರ್ (ಗಾಲ್), ಕ್ರಿಶನ್ ಬಹದ್ದೂರ್ ಪರಾಕ್ (ಹಾಕಿ), ಸುಶೀಲಾ ಚಾನು (ಹಾಕಿ), ಪವನ್ ಕುಮಾರ್ (ಕಬಡ್ಡಿ), ರಿತು ನೇಗಿ (ಕಬಡ್ಡಿ) ನಸೀನ್ (ಖೋ-ಖೋ), ಪಿಂಕಿ ( ಲಾನ್ ಬೌ), ಐಶ್ವರಿ ಪ್ರತಾಪ್ ಸಿಂಗ್ ತೋಮರ್ (ಶೂಟಿಂಗ್), ಇಶಾ ಸಿಂಗ್ (ಶೂಟಿಂಗ್), ಹರಿಂದರ್ ಪಾಲ್ ಸಿಂಗ್ ಸಂಧು (ಸ್ಮಾನ್. ಐಹಿಕಾ ಮುಖರ್ಜಿ (ಟೇಬಲ್ ಟೆನಿಸ್), ಸುನಿಲ್ ಕುಮಾರ್ (ಕುಸ್ತಿ), ಅಂತಿಮ್ (ಕುಸ್ತಿ), ನವೋರಮ್ ರೋಶಿಬಿನಾ ದೇವಿ (ವುಶು), ಶೀತಲ್ ದೇವಿ (ಪ್ಯಾರಾ ಆರ್ಚರಿ), ಇಲ್ಲೂರಿ ಅಜಯ್ ಕುಮಾರ್ ರೆಡ್ಡಿ (ಅಂದ ಕ್ರಿಕೆಟ್. ಪ್ರಾಚಿ ಯಾದವ್ (ಪ್ಯಾರಾ ಕ್ಯಾನೋಯಿಂಗ್).- ದ್ರೋಣಾಚಾರ್ಯ ಪ್ರಶಸ್ತಿ: ಲಲಿತ್ ಕುಮಾರ್ (ಕುಸ್ತಿ), ಆರ್‌ಬಿ ರಮೇಶ್ (ಚೆಸ್), ಮಹಾವೀರ್ ಪ್ರಸಾದ್ ಸೈನಿ (ಪ್ಯಾರಾ ಅಥ್ಲೆಟ್) ಶಿವೇಂದ್ರ ಸಿಂಗ್ (ಹಾಕಿ), ಗಣೇಶ ಪ್ರಭಾಕರ್ (ಮಲ್ಲಗಂಬ)- ದ್ರೋಣಾಚಾರ್ಯ ಪ್ರಶಸ್ತಿ (ಜೀವಮಾನ ಶ್ರೇಷ್ಠ ಸಾಧನೆ): ಜರತ್ ಸಿಂಗ್ ಗ್ರೆವಾಲ್ (ಗಾಲ್) ಭಾಸ್ಮರನ್ ಇ. (ಕಬಡ್ಡಿ), ಜಯಂತ ಕುಮಾರ್ ಪುಶಿಲಾಲ್ (ಟೇಬಲ್ ಟೆನಿಸ್).- ಜೀವಮಾನ ಸಾಧನೆಗಾಗಿ ಧ್ಯಾನ್ ಚಂದ್ ಪ್ರಶಸ್ತಿ: ಮಂಜುಷಾ ಕನ್ಸರ್ (ಬ್ಯಾಡ್ಮಿಂಟನ್ ವಿತ್ ಕುಮಾರ್ ಶರ್ಮಾ (ಹಾಕಿ), ಕವಿತಾ ಸೆಲ್ವರಾಜ್ (ಕಬಡ್ಡಿ)