Job Description: ➤ ಪ್ಯಾರಿಸ್: ಶನಿವಾರ (06-06-2026) ನಡೆದ ಫ್ರೆಂಚ್ ಓಪನ್ ಮಹಿಳಾ ಸಿಂಗಲ್ಸ್ ಫೈನಲ್ ಪಂದ್ಯದಲ್ಲಿ ರಷ್ಯಾದ ಉದಯೋನ್ಮುಖ ತಾರೆ ಮಿರಾ ಆಂಡ್ರೀವಾ (Mirra Andreeva) ಅವರು ಅದ್ಭುತ ಪ್ರದರ್ಶನ ನೀಡುವ ಮೂಲಕ ತಮ್ಮ ಚೊಚ್ಚಲ ಗ್ರಾಂಡ್‌ಸ್ಟ್ಯಾಮ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ಸುಮಾರು ಒಂದೂವರೆ ಗಂಟೆಗಳ ಕಾಲ ನಡೆದ ತೀವ್ರ ಹೋರಾಟದ ಅಂತಿಮ ಹಣಾಹಣಿಯಲ್ಲಿ ಆಂಡ್ರೀವಾ ಪೋಲೆಂಡ್‌ನ ಎದುರಾಳಿ ಮಾಜಾ ಶಾಲಿನ್ ಸ್ಕಾ (Maja Chwalińska) ಅವರನ್ನು 6-3, 6-2 ನೇರ ಸೆಟ್‌ಗಳಿಂದ ಸುಲಭವಾಗಿ ಮಣಿಸಿದರು. ➤ ಮೋನಿಕಾ ಸೆಲೆಸ್ ನಂತರ ಅತ್ಯಂತ ಕಿರಿಯ ಆಟಗಾರ್ತಿ: ಪ್ರಸ್ತುತ ವಿಶ್ವದ 8ನೇ ಶ್ರೇಯಾಂಕಿತೆ, 19 ವರ್ಷದ ಮಿರಾ ಆಂಡ್ರೀವಾ ಈ ಪ್ರತಿಷ್ಠಿತ ಕ್ಲೇ-ಕೋರ್ಟ್ ಪ್ರಶಸ್ತಿಯನ್ನು ಗೆಲ್ಲುವ ಮೂಲಕ ಹೊಸ ಇತಿಹಾಸ ಸೃಷ್ಟಿಸಿದ್ದಾರೆ. 1992ರಲ್ಲಿ ದಂತಕಥೆ ಮೋನಿಕಾ ಸೆಲೆಸ್ (Monica Seles) ನಂತರ ಫ್ರೆಂಚ್ ಓಪನ್ ಮುಡಿಗೇರಿಸಿಕೊಂಡ ಅತ್ಯಂತ ಕಿರಿಯ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಇವರು ಪಾತ್ರರಾಗಿದ್ದಾರೆ. ಮತ್ತೊಂದೆಡೆ, ಇಡೀ ಟೂರ್ನಿಯಲ್ಲಿ ಕ್ವಾಲಿಫೈಯರ್ ಹಂತದಿಂದ ಅದ್ಭುತವಾಗಿ ಆಡಿ ಫೈನಲ್‌ಗೇರಿದ್ದ ಪೋಲೆಂಡ್‌ನ ಶಾಲಿನ್ ಸ್ಕಾ ಫ್ರೆಂಚ್ ಓಪನ್ ಪ್ರಶಸ್ತಿ ವಂಚಿತರಾಗಿ ಇತಿಹಾಸ ನಿರ್ಮಿಸುವ ಪ್ರಯತ್ನದಲ್ಲಿ ವಿಫಲರಾದರು.➤ ಭವಿಷ್ಯದ ಟೆನ್ನಿಸ್ ಸೂಪರ್‌ಸ್ಟಾರ್ ಆಂಡ್ರೀವಾ: ಟೂರ್ನಿಯುದ್ದಕ್ಕೂ ಸ್ಥಿರ ಹಾಗೂ ಆಕ್ರಮಣಕಾರಿ ಆಟ ಪ್ರದರ್ಶಿಸಿದ್ದ ಆಂಡ್ರಿವಾ ಫೈನಲ್ ಪಂದ್ಯದ ಆರಂಭಕ್ಕೂ ಮುನ್ನವೇ ಗೆಲ್ಲುವ ನೆಚ್ಚಿನ ಆಟಗಾರ್ತಿಯಾಗಿ ಗುರುತಿಸಿಕೊಂಡಿದ್ದರು. ತಮ್ಮ ಕೊನೆಯ ಮೂರು ಪಂದ್ಯಗಳಲ್ಲಿ ಕೇವಲ 12 ಸೆಟ್‌ಗಳನ್ನು ಮಾತ್ರ ಎದುರಾಳಿಗಳಿಗೆ ಬಿಟ್ಟುಕೊಡುವ ಮೂಲಕ ಅವರು ಭವಿಷ್ಯದ ಗ್ರಾಂಡ್‌ಸ್ಟ್ಯಾಮ್ ಚಾಂಪಿಯನ್ ಆಗುವ ಎಲ್ಲಾ ಲಕ್ಷಣಗಳನ್ನು ಪ್ರದರ್ಶಿಸಿದ್ದರು. ಎರಡು ವರ್ಷಗಳ ಹಿಂದೆ ತಮ್ಮ 17ನೇ ವಯಸ್ಸಿನಲ್ಲೇ ಫ್ರೆಂಚ್ ಓಪನ್ ಸೆಮಿಫೈನಲ್ ತಲುಪಿದ್ದ ಆಟಗಾರ್ತಿ, ಕಡೆಗೂ ಈ ಬಾರಿ ಪ್ರಶಸ್ತಿ ಗೆದ್ದು ತಮ್ಮ ಕನಸನ್ನು ಈಡೇರಿಸಿಕೊಂಡಿದ್ದಾರೆ.ಇನ್ನು ಹೆಚ್ಚಿನ ಪ್ರಚಲಿತ ಘಟನೆಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ