* ಭಾರತದ ಖ್ಯಾತ ಟೆನಿಸ್ ಆಟಗಾರ ರೋಹನ್ ಬೋಪಣ್ಣ ಮತ್ತು ಅವರ ಆಸ್ಟ್ರೇಲಿಯನ್‌ ಜತೆಗಾರ ಮ್ಯಾಥ್ಯ ಎಲ್ಲೆನ್ ಅವರು ಮಿಯಾಮಿ ಓಪನ್ ಟೆನಿಸ್ ಟೂರ್ನಿಯ(Miami Open 2024) ಪುರುಷರ ಡಬಲ್ಸ್ ಫೈನಲ್‌ನಲ್ಲಿ ಗೆಲುವು ದಾಖಲಿಸಿ ಚೊಚ್ಚಲ ಟ್ರೋಫಿಯನ್ನು ಎತ್ತಿ ಹಿಡಿದಿದ್ದಾರೆ.* ಟೆನಿಸ್ ಆಟಗಾರ ಬೋಪಣ್ಣ ಅವರು ಈವರೆಗೆ 25 ಡಬಲ್ಸ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಮಿಯಾಮಿ ಓಪನ್‌ ಎಟಿಪಿ 1000 ಟೆನಿಸ್‌ ಟೂರ್ನಿಯ ಫೈನಲ್‌ ಪ್ರವೇಶಿಸಿಸುವ ಮೂಲಕ ಎಲ್ಲಾ 9 ಎಟಿಪಿ ಮಾಸ್ಟರ್ಸ್‌ ಟೂರ್ನಿಗಳಲ್ಲಿ ಫೈನಲ್‌ಗೇರಿದ 2ನೇ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. * ಫೈನಲ್‌ನಲ್ಲಿ ಬೋಪಣ್ಣ ಮತ್ತು ಎಬ್ಡೆನ್ ಜೋಡಿ ವಿಶ್ವದ 2ನೇ ಶ್ರೇಯಾಂಕಿತ ಕ್ರೊವೇಷಿಯಾದ ಇವಾನ್‌ ಡೊಡಿಗ್‌-ಅಮೆರಿಕದ ಆಸ್ಟಿನ್‌ ಕ್ರಾಜಿಕೆಕ್‌ ವಿರುದ್ಧ  6-7 (3), 6-3, 10-6 ಅಂತರದಿಂದ ಗೆದ್ದು ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು. * ವಿಶ್ವ ಕ್ರಮಾಂಕದಲ್ಲಿ ಎರಡನೇ ಸ್ಥಾನದಲ್ಲಿದ್ದ ಬೋಪಣ್ಣ, ಈ ಗೆಲುವಿನ ಮೂಲಕ ಮತ್ತೆ ಅಗ್ರಸ್ಥಾನ ಪಡೆದುಕೊಂಡಿದ್ದಾರೆ. ರೋಹನ್ ಬೋಪಣ್ಣ ಅವರು ಈ ಪ್ರಶಸ್ತಿಯೊಂದಿಗೆ ಮಾಸ್ಟರ್ಸ್ 1000 ಪ್ರಶಸ್ತಿಯನ್ನು ಗೆದ್ದ ಅತ್ಯಂತ ಹಿರಿಯ ಆಟಗಾರ ಎಂಬ ತಮ್ಮದೇ ಆದ ದಾಖಲೆಯನ್ನು ಮತ್ತೆ ಬರೆದರು.* 2017 ರ ಫ್ರೆಂಚ್ ಓಪನ್‌ನಲ್ಲಿ ಕೆನಡಾದ ಗೇಬ್ರಿಯೆಲಾ ದಬ್ರೊವ್ಸ್ಕಿ ಅವರೊಂದಿಗೆ ಮಿಶ್ರ ಡಬಲ್ಸ್‌ನಲ್ಲಿ ಅವರ ಹಿಂದಿನ ಗ್ರ್ಯಾಂಡ್ ಸ್ಲಾಮ್ ಗೆಲುವು ಸಾಧಿಸಿದರು.