* ಇತ್ತೀಚಿಗೆ ಕೇಂದ್ರ ಶಕ್ತಿ ಸಚಿವಾಲಯ ನವೀಕರಿಸಬಹುದಾದ ಇಂಧನ ವಲಯದಲ್ಲಿ ಹೊರ ಹೊಮ್ಮುತ್ತಿರುವ ಹೊಸ ತಂತ್ರಜ್ಞಾನವನ್ನು ಗುರುತಿಸಿ ತಂತ್ರಜ್ಞಾನಗಳನ್ನು ಭಾರತದಲ್ಲಿಯೇ ಅಭಿವೃದ್ಧಿ ಪಡಿಸಲು 'ಮಹಿ‌ರ್' ಎಂಬ ನೂತನ ಯೋಜನೆ ಜಾರಿಗೆ ಬಂದಿದೆ.* ಕೇಂದ್ರ ಸರ್ಕಾರ 2070ರ ಒಳಗಾಗಿ ಇಂಗಾಲದ ಡೈಆಕ್ಸೈಡ್  ಶೂನ್ಯ ಹೊರಸೂಸುವಿಕೆ ಗುರಿ ತಲುಪುವುದಾಗಿ ಸ್ವಯಂ ಘೋಷಿಸಿದ್ದು, ಭಾರತ ಇಂಧನ ಕ್ಷೇತ್ರದಲ್ಲಿ ಸ್ವಾವಲಂಬನೆಯಾಗುವ ಉದ್ದೇಶದಿಂದ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಕೇಂದ್ರ ಸರ್ಕಾರ ವರದಿಯಲ್ಲಿ ಉಲ್ಲೇಖಿಸಿದೆ.