* ಮಹಿಳಾ ಟೆಸ್ಟ್‌ನಲ್ಲಿ ವೇಗದ ದ್ವಿಶತಕ ಸಿಡಿಸಿ ಐತಿಹಾಸಿಕ ದಾಖಲೆ ಬರೆದ ಟೀಂ ಇಂಡಿಯಾದ ಶಫಾಲಿ ವರ್ಮಾ ಅವರು ದಕ್ಷಿಣ ಆಫ್ರಿಕಾ ವಿರುದ್ಧದ ಏಕೈಕ ಟೆಸ್ಟ್‌ನಲ್ಲಿ 205 ರನ್ ಗಳಿಸುವ ಮೂಲಕ ಶಫಾಲಿ ವರ್ಮಾ ಅವರು ಐತಿಹಾಸಿಕ ದಾಖಲೆ ಬರೆದಿದ್ದಾರೆ. * ಇಪ್ಪತ್ತರ ಹರೆಯದ ಶೆಫಾಲಿ ಅವರು 194 ಎಸೆತಗಳಲ್ಲಿ ದ್ವಿಶತಕ ಪೂರೈಸಿ ಆಸ್ಟ್ರೇಲಿಯದ ಅನ್ನಾಬೆಲ್ ಸದರ್ಲೆಂಡ್ ಅವರನ್ನು ಸೋಲಿಸಿದ್ದಾರೆ.* ಭಾರತ ಮಹಿಳಾ ಕ್ರಿಕೆಟ್‌ ತಂಡದ ಆಟಗಾರ್ತಿ ಶಫಾಲಿ ವರ್ಮಾ ಅವರು ಟೆಸ್ಟ್‌ ಕ್ರಿಕೆಟ್‌ನಲ್ಲಿ ಚೊಚ್ಚಲ ದ್ವಿಶತಕ ಸಿಡಿಸಿದ್ದಾರೆ. ಆ ಮೂಲಕ ಟೆಸ್ಟ್ ದ್ವಿಶತಕ ಸಿಡಿಸಿದ ಭಾರತದ ಎರಡನೇ ಮಹಿಳಾ ಬ್ಯಾಟ್ಸ್‌ವುಮೆನ್‌ ಎನಿಸಿಕೊಂಡಿದ್ದಾರೆ. * ಭಾರತ ಮತ್ತು ಸೌತ್ ಆಫ್ರಿಕಾ ಮಹಿಳಾ ತಂಡಗಳ ನಡುವೆ ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಶೆಫಾಲಿ ವರ್ಮಾ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿದರು. ಈ ದ್ವಿಶತಕದಲ್ಲಿ  23 ಬೌಂಡರಿ ಮತ್ತು 8 ಸಿಕ್ಸರ್‌’ಗಳು ಸೇರಿವೆ. * 256 ಎಸೆತಗಳಲ್ಲಿ ದ್ವಿಶತಕ ಸಿಡಿಸಿದ ಆಸ್ಟ್ರೇಲಿಯಾದ ಅನ್ನಾಬೆಲ್ ಸದರ್ಲ್ಯಾಂಡ್ ಅವರು ದಾಖಲೆ ನಿರ್ಮಿಸಿದ್ದರು. * ಶೆಫಾಲಿ ವರ್ಮಾ 20 ವರ್ಷ ಮತ್ತು 152 ದಿನಗಳ ವಯಸ್ಸಿನಲ್ಲಿ ದ್ವಿಶತಕ ಗಳಿಸಿದ್ದಾರೆ. ಶೆಫಾಲಿ ಕಿರಿಯ ವಯಸ್ಸಿನಲ್ಲಿ ಈ ಸಾಧನೆ ಮಾಡಿದ ಎರಡನೇ ಆಟಗಾರ್ತಿ ಎನಿಸಿಕೊಂಡಿದ್ದಾರೆ. * 2002ರಲ್ಲಿ ಮಿಥಾಲಿ ರಾಜ್ ಕೇವಲ 19ನೇ ವಯಸ್ಸಿನಲ್ಲಿ ದ್ವಿಶತಕ ಬಾರಿಸಿದ್ದರು. ಶೆಫಾಲಿ ವರ್ಮಾ 197 ಎಸೆತಗಳಲ್ಲಿ 205 ರನ್‌’ಗಳ ಅಮೋಘ ಇನ್ನಿಂಗ್ಸ್ ಆಡಿದ್ದಾರೆ. * ಸ್ಮೃತಿ ಮಂಧನಾ 149 ರನ್‌ (161 ಎಸೆತ, 27 ಬೌಂಡರಿ, 1 ಸಿಕ್ಸರ್)‌ ಹೊಡೆದು ಔಟಾದರೆ ಶಫಾಲಿ ವರ್ಮಾ 205 ರನ್‌(197 ಎಸೆತ, 23 ಬೌಂಡರಿ, 8 ಸಿಕ್ಸರ್‌) ಹೊಡೆದು ರನೌಟ್‌ಗೆ ಬಲಿಯಾದರು.* 1984 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಬ್ರಿಟಿನ್ 137 ಎಸೆತಗಳಲ್ಲಿ ಸೆಂಚುರಿ ಬಾರಿಸಿ ಈ ವಿಶ್ವ ದಾಖಲೆ ನಿರ್ಮಿಸಿದ್ದರು. ಇದೀಗ 40 ವರ್ಷಗಳ ಹಳೆಯ ದಾಖಲೆಯನ್ನು ಮುರಿಯುವಲ್ಲಿ ಶಫಾಲಿ ವರ್ಮಾ ಅವರು ಯಶಸ್ವಿಯಾಗಿದ್ದಾರೆ.* ಸತೀಶ್ ಶುಭಾ 15 ರನ್ ಗಳಿಸಿ ಔಟಾದರೇ ಜೆಮಿಮಾ ರೋಡ್ರಿಗಸ್ 55 ರನ್ ಗಳಿಸಿ ಔಟಾದರು. ಹರ್ಮನ್ ಪ್ರೀತ್ ಕೌರ್ ಅಜೇಯ 42 ರನ್ ಹಾಗೂ ರಿಚಾ ಘೋಷ್ ಅಜೇಯ 43 ರನ್ ಗಳಿಸಿ ಆಡುತ್ತಿದ್ದಾರೆ. ಮೊದಲ ದಿನದಾಟಕ್ಕೆ ಭಾರತ 4 ವಿಕೆಟ್ ನಷ್ಟಕ್ಕೆ 525 ರನ್ ಸೇರಿಸಿದೆ.