* ಮೇಘಾಲಯ ಮೊದಲ ಬಾರಿಗೆ ಮಹಿಳಾ ಪೊಲೀಸ್ ಮಹಾನಿರ್ದೇಶಕರಾಗಿ (ಡಿಜಿಪಿ) 1992 ನೇ ಬ್ಯಾಚ್ ನ ಐಪಿಎಸ್ ಅಧಿಕಾರಿಯಾದ ಇದಾಶಿಶ ನೊಂಗ್ರಾಂಗ್ ಅವರನ್ನು ನೇಮಕ ಮಾಡಲಾಗಿದೆ.* ಮೇ 19 ರಂದು ನಿವೃತ್ತರಾಗಲಿರುವ ಎಲ್.ಆರ್.ಬಿಷ್ಣೋಯಿ ಅವರ ಸ್ಥಾನಕ್ಕೆ ಇದಾಶಿಶ ನೊಂಗ್ರಾಂಗ್ ಅವರನ್ನು ನೇಮಕ ಮಾಡಲಾಗಿದೆ.* ಇದಾಶಿಶಾ ನೊಂಗ್ರಾಂಗ್ ಅವರು ಪ್ರಸ್ತುತ ಮೇಘಾಲಯ ನಾಗರಿಕ ರಕ್ಷಣಾ ಮಹಾನಿರ್ದೇಶಕರಾಗಿ ಹಾಗೂ 2021ರಲ್ಲಿ ಹಂಗಾಮಿ ಡಿಜಿಪಿಯಾಗಿ ಸೇವೆ ಸಲ್ಲಿಸಿದ್ದರು. * ನೊಂಗ್ರಾಂಗ್ ಅವರು 2024ರ ಮೇ 20 ರಿಂದ 2026 ರ ಮೇ 19ರವರೆಗೆ ಮೇಘಾಲಯದ ಪೊಲೀಸ್ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಲಿದ್ದಾರೆ. * ಚೌಹಾಣ್, ಇದಾಶಿಶಾ ನೊಂಗ್ರಾಂಗ್‌ ಅವರನ್ನು ಹೊಸ ಡಿಜಿಪಿಯನ್ನಾಗಿ ನೇಮಕ ಮಾಡಿ ಶನಿವಾರ ಆದೇಶ ಹೊರಡಿಸಿದ್ದಾರೆ. * ''ಎಲ್ಲ ಅಡೆ-ತಡೆಗಳನ್ನು ಮೀರಿ ಈ ಸ್ಥಾನ ಅಲಂಕರಿಸಿದ ರಾಜ್ಯದ ಮೊದಲ ಮಹಿಳಾ ಬುಡಕಟ್ಟು ಮಹಿಳೆ ಇತಿಹಾಸವನ್ನು ನಿರ್ಮಿಸಿದ್ದಾರೆ,'' ಎಂದು ಇದಾಶಿಶಾ ನೊಂಗ್ರಾಂಗ್ ಬಗ್ಗೆ ಮೇಘಾಲಯ ಮುಖ್ಯಮಂತ್ರಿ ಕಾಸ್ರಾಡ್ ಕೆ.ಸಂಸ್ಮಾ ಅವರು ತಿಳಿಸಿದ್ದಾರೆ.