Job Description: * ಮೇಘಾಲಯದ ಮುಖ್ಯಮಂತ್ರಿಯಾಗಿ ನ್ಯಾಷನಲ್ ಪೀಪಲ್ಸ್ ಪಾರ್ಟಿಯ (ಎನ್‌ಪಿಪಿ) ಕಾಮ್ರಾಡ್ ಸಂಗ್ಮಾ ಮತ್ತು ನಾಗಾಲ್ಯಾಂಡ್‌ನ ಮುಖ್ಯಮಂತ್ರಿಯಾಗಿ ನ್ಯಾಷನಲಿಸ್ಟ್ ಡೆಮಾಕ್ರಟಿಕ್ ಪ್ರೋಗ್ರೆಸಿವ್ ಪಾರ್ಟಿಯ (ಎನ್ಡಿಪಿಪಿ) ನೇಫಿಯು ರಿಯೊ ಅವರು ಮಾರ್ಚ್ 07 ಮಂಗಳವಾರ ದಿನದಂದು ಪ್ರಮಾಣ ವಚನ ಸ್ವೀಕರಿಸಿದರು.* ಮೇಘಾಲಯದಲ್ಲಿ ಮಂಗಳವಾರ ರಾಜ್ಯಪಾಲ ಫಗು ಚೌಹಾಣ್ ಅವರು ಕಾನ್ನಾಡ್ ಸಂಗ್ಮಾ ಅವರಿಗೆ ಪ್ರಮಾಣವಚನ ಬೋಧಿಸಿದರು. ಈ ಮೂಲಕ ಸಂಗ್ಮಾ ಎರಡನೇ ಬಾರಿ ಮುಖ್ಯಮಂತ್ರಿಯಾಗಿದ್ದಾರೆ.* ಉಪ ಮುಖ್ಯಮಂತ್ರಿಗಳಾಗಿ ಎನ್‌ಪಿಪಿಯ ಪ್ರೆಸ್ಟೋನ್ ಟೈನ್‌ಸಾಂಗ್ ಮತ್ತು ಸ್ಕಿಯಾವ್‌ಭಾಲಾಂಗ್ ಧಾರ್ ಸೇರಿದಂತೆ 11 ಸಚಿವರು ಪ್ರಮಾಣ ವಚನ ಸ್ವೀಕರಿಸಿದರು. ಬಿಜೆಪಿಯ ಅಲೆಕ್ಸಾಂಡರ್ ಲಾಲೂ ಹೆಕ್, ಯುಡಿಪಿಯ ಪೌಲ್ ಲಿಂಗೊ, ಕಿರ್ಮನ್ ಶೈಲ್ಲಾ ಮತ್ತು ಎಚ್‌ಎಸ್ಎಪಿಡಿಪಿಯ ಶಕ್ತಿಯಾರ್ ವಾರ್ಜಿ ಅವರೂ ಸಚಿವರಾಗಿ ಅಧಿಕಾರದ ಗೋಪ್ಯತೆ ಸ್ವೀಕರಿಸಿದರು.* ಐದನೇ ಬಾರಿ ಸಿ.ಎಂ ಆಗಿ ರಿಯೋ ಎನ್‌ಡಿಪಿಪಿಯ ನೇಫಿಯು ರಿಯೊ ಐದನೇ ಬಾರಿ ನಾಗಾಲ್ಯಾಂಡಿನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. 72 ವರ್ಷದ ನೇಫಿಯು ರಿಯೊ ಅವರಿಗೆ ರಾಜ್ಯಪಾಲ ಲಾ. ಗಣೇಶನ್ ಅಧಿಕಾರದ ಗೋಪ್ಯತೆ ಬೋಧಿಸಿದರು.* ಉಪ ಮುಖ್ಯಮಂತ್ರಿಗಳಾಗಿ ಟಿ.ಆರ್. ಜಿಲಿಯಾಂಗ್ ಮತ್ತು ವೈ.ಪ್ಯಾಟನ್ ಪ್ರಮಾಣ ವಚನ ಸ್ವೀಕರಿಸಿದರು.