* ಪ್ರತಿ ವರ್ಷ ಮೇ 7 ರಂದು ಅಂತರರಾಷ್ಟ್ರೀಯ ಅಮೆಚೂರ್ ಅಥ್ಲೆಟಿಕ್ ನಲ್ಲಿ ಯುವಜನರು ಹೆಚ್ಚು ಹೆಚ್ಚು ಸಂಖ್ಯೆಯಲ್ಲಿ ಭಾಗವಹಿಸುವಿಕೆಯನ್ನು ಉತ್ತೇಜಿಸಲೆಂದು ಇಂಟರ್ನ್ಯಾಷನಲ್ ಅಮೆಚೂರ್ ಅಥ್ಲೆಟಿಕ್ ಫೆಡರೇಶನ್ (ಐಎಎಎಫ್) ವಿಶ್ವ ಅಥ್ಲೆಟಿಕ್ಸ್ ದಿನವನ್ನು ಪರಿಚಯಿಸಿದೆ.* ವಿಶ್ವ ಅಥ್ಲೆಟಿಕ್ಸ್ ದಿನದ 2024 ರ ಥೀಮ್ 'ವರ್ಲ್ಡ್ ಮೈಲ್ ಚಾಲೆಂಜ್' ಎಂಬುದು ಥೀಮ್ ಆಗಿದೆ.* ರೋಗಗಳನ್ನು ತಡೆಗಟ್ಟುವ ಮತ್ತು ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳುವ ಸಾಧನವಾಗಿ ಕ್ರೀಡೆ ಮತ್ತು ವ್ಯಾಯಾಮವನ್ನು ಉತ್ತೇಜಿಸುವುದು ಈ ದಿನದ ಉದ್ದೇಶವಾಗಿದೆ. * ಮೊಟ್ಟ ಮೊದಲ ಬಾರಿಗೆ ವಿಶ್ವ ಅಥ್ಲೆಟಿಕ್ಸ್‌ ದಿನವನ್ನು ಮೇ 15, 1996 ರಂದು 50 ದೇಶಗಳ ಭಾಗವಹಿಸುವಿಕೆಯೊಂದಿಗೆ ಆಚರಿಸಲಾಯಿತು. ಈ ಕಾರ್ಯಕ್ರಮವನ್ನು ಇಂಟರ್ನ್ಯಾಷನಲ್ ಅಮೆಚೂರ್ ಅಥ್ಲೆಟಿಕ್ ಫೆಡರೇಶನ್ ಅಂದಿನ ಅಧ್ಯಕ್ಷರಾದ ಪ್ರಿಮೊ ನೆಬಿಯೊಲೊ ಅವರು ಪರಿಚಯಿಸಿದರು. * ವಿಶ್ವ ಅಥ್ಲೆಟಿಕ್ಸ್‌ ದಿನವನ್ನು ಇಂಟರ್ನ್ಯಾಷನಲ್ ಅಮೆಚೂರ್ ಅಥ್ಲೆಟಿಕ್ ಫೆಡರೇಶನ್ (ಐಎಎಎಫ್‌) ಆಯೋಜಿಸಿ ಜೊತೆಗೆ ಪ್ರಾಯೋಜಿಸಿದೆ.