* ಪ್ರತಿ ವರ್ಷ ಮೇ 4 ರಂದು ಕಲ್ಲಿದ್ದಲು ಹೊರತೆಗೆಯುವಲ್ಲಿ ಕಲ್ಲಿದ್ದಲು ಗಣಿಗಾರರ ಶ್ರಮ ಮತ್ತು ಗಮನಾರ್ಹ ಕೊಡುಗೆಗಳನ್ನು ಗುರುತಿಸಲು ಮತ್ತು ಪ್ರಶಂಸಿಸಲು ಕಲ್ಲಿದ್ದಲು ಗಣಿಗಾರರ ದಿನವನ್ನು ಆಚರಿಸಲಾಗುತ್ತದೆ.* ಭಾರತದಲ್ಲಿ ಕಲ್ಲಿದ್ದಲು ಗಣಿಗಾರರು ನೀಡಿದ ಕೊಡುಗೆಗಳು ಮತ್ತು ತ್ಯಾಗಗಳನ್ನು ಗುರುತಿಸಲು ಮತ್ತು ಗೌರವಿಸಲು ಕಲ್ಲಿದ್ದಲು ಗಣಿಗಾರರ ದಿನವನ್ನು ಸ್ಥಾಪಿಸಲಾಗಿದ್ದು, ಭಾರತದಲ್ಲಿ ಮೊದಲ ಭೂಗತ ಕಲ್ಲಿದ್ದಲು ಗಣಿ 1907 ರಲ್ಲಿ ಪಶ್ಚಿಮ ಬಂಗಾಳದ ರಾಣಿಗಂಜ್‌ನಲ್ಲಿ ಉದ್ಘಾಟನೆಯಾದ ದಿನದ ನೆನಪಿಗಾಗಿ ಮೇ 4 ರಂದು ಕಲ್ಲಿದ್ದಲು ಗಣಿಗಾರರ ದಿನವನ್ನು ಆಚರಿಸಲಾಗುತ್ತದೆ.* ಕಲ್ಲಿದ್ದಲು ಗಣಿಗಾರಿಕೆ ಒಂದು ನಿರ್ಣಾಯಕ ಪಳೆಯುಳಿಕೆ ಇಂಧನವಾಗಿದ್ದು, ವಿಶೇಷವಾಗಿ ಉಕ್ಕು ಮತ್ತು ಸಿಮೆಂಟ್ ಉತ್ಪಾದನೆಯಲ್ಲಿ ಮತ್ತು ವಿದ್ಯುತ್ ಉತ್ಪಾದನೆ ಹಾಗು ಕೈಗಾರಿಕಾ ಉತ್ಪಾದನೆಯಂತಹ ವಿವಿಧ ಉದ್ದೇಶಗಳಿಗಾಗಿ ವ್ಯಾಪಕವಾಗಿ ಬಳಸಲಾಗುತ್ತದೆ. * ಕಲ್ಲಿದ್ದಲು ಗಣಿಯನ್ನು ಮೊದಲ 1575 ರಲ್ಲಿ ಸ್ಕಾಟ್ಲೆಂಡ್‌ನಲ್ಲಿ ತೆರೆಯಲಾಯಿತು, ಭಾರತದ ಮೊದಲ ಕಲ್ಲಿದ್ದಲು ಗಣಿಯನ್ನು 1774 ರಲ್ಲಿ ಸ್ಥಾಪಿಸಲಾಗಿದ್ದು, ಆದರೆ  ಈಸ್ಟ್ ಇಂಡಿಯಾ ಕಂಪನಿಯ ಜಾನ್ ಸಮ್ಮರ್ ಮತ್ತು ಸ್ಯೂಟೋನಿಯಸ್ ಗ್ರಾಂಟ್ ಹೀಟ್ಲಿ ಈ ಕಲ್ಲಿದ್ದಲು ಗಣಿಗಾರಿಕೆಯನ್ನು ನಡೆಸುತ್ತಿದ್ದರು.