* ಜಗತ್ತಿನ ಎತ್ತರ ಪರ್ವತವಾದ ಮೌಂಟ್ ಎವರೆಸ್ಟ್ ಪರ್ವತವು ಈಗ ಕಸದಿಂದ ತುಂಬಿದೆ. ಎವರೆಸ್ಟ್ ಪ್ರದೇಶದಲ್ಲಿ ಮೌಂಟೇನ್ ಕ್ಲೀನಿಂಗ್ ಅಭಿಯಾನ 2024 ಆರಂಭಿಸಿರುವ ಹಿನ್ನೆಲೆಯಲ್ಲಿ ನೇಪಾಳ ಸೇನೆಯು ಮೌಂಟ್ ಎವರೆಸ್ಟ್‌ನಲ್ಲಿ ಸುಮಾರು 11 ಟನ್ ಕಸವನ್ನು ಹೊರತೆಗೆಯಲಾಗಿದೆ.ಉಳಿದಿರುವ ಕಸವನ್ನು ತೆಗೆದುಹಾಕಲು ಹಲವು ವರ್ಷಗಳೇ ಬೇಕಾಗಬಹುದು ಎನ್ನಲಾಗುತ್ತಿದೆ.* 1991 ರಿಂದ 'ಸಗರ್ ಮಾತಾ ಮಾಲಿನ್ಯ ತಡೆ ಸಮಿತಿ' ಎಂಬ ಏನ್ ಜಿಒ ಪರ್ವತದ ಸ್ವಚ್ಛತೆ ಕಾರ್ಯ ಮಾಡುತ್ತಿದೆ.* ಚಾರಣಿಗ ಅಂಗ ಬಾಬು ಶೆಪ್ರಾ ಅವರ ನೇತೃತ್ವದಲ್ಲಿ ತಂಡವು ಈ ಬಾರಿ ಸ್ವಚ್ಛತೆ ಕಾರ್ಯ ಕೈಗೊಂಡಿದೆ. 'ಚಾರಣ ಮಾರ್ಗದ ದಕ್ಷಿಣ ಕಣಿವೆ ಕ್ಯಾಂಪ್‌ನಲ್ಲಿ ಸುಮಾರು 40-50 ಟನ್‌ ಗಳಷ್ಟು ಕಸ ಇರಬಹುದು' ಎಂದು ಅಂಗ ಅಂದಾಜಿಸಿದ್ದಾರೆ.* ಎವರೆಸ್ಟ್ ಪರ್ವತ ಏರುವ ಪ್ರತಿಯೊಬ್ಬರೂ 4 ಸಾವಿರ ಡಾಲರ್ (ಸುಮಾರು ₹3.33 ಲಕ್ಷ) ಠೇವಣಿ ಇಡಬೇಕು. ಒಂದು ವೇಳೆ ವ್ಯಕ್ತಿಯು ತಾನು ಸೃಷ್ಟಿಸಿದ ಕಸವನ್ನು ವಾಪಸ್ ತಂದರೆ ಆತನಿಗೆ ಈ ಠೇವಣಿ ಹಣವನ್ನು ವಾಪಾಸು ಮಾಡುವ ಕ್ರಮವನ್ನು ನೇಪಾಳ ಸರ್ಕಾರ 2014ರಲ್ಲಿ ಜಾರಿಗೊಳಿಸಿತ್ತು.* ಕಸದ ರಾಶಿಯ ಜೊತೆ ನಾಲ್ಕು ಶವ ಹಾಗೂ ಒಂದು ಅಸ್ಥಿಪಂಜರವನ್ನು ಹೊರತೆಗೆದಿದೆ.* ಹಳೆಯ ಟೆಂಟ್‌ಗಳು, ಆಹಾರ ಪೊಟ್ಟಣಗಳು, ಬೆಂಕಿ ಹೊತ್ತಿಸಲು ಬಳಸುವ ಗ್ಯಾಸ್ ಕ್ಯಾರ್ಟ್ರಿಡ್ಜ್‌ಗಳು, ಆಮ್ಲಜನಕದ ಬಾಟಲಿಗಳು, ಹಗ್ಗಗಳನ್ನು ಚಾರಣಿಗರು ಇಲ್ಲಿಯೇ ಬಿಟ್ಟು ತೆರಳಿದ್ದಾರೆ' ಚಾರಣಿಗ ಅಂಗ ಬಾಬು ಹೇಳಿದ್ದಾರೆ. ನೇಪಾಳ ಸರ್ಕಾರವು ಚಾರಣಿಗರಲ್ಲಿ ಪರಿಸರ ಜಾಗೃತಿ ಮೂಡಿಸುವ ಪ್ರಯತ್ನ ಮಾಡುತ್ತಿದೆ. ಈ ಕಾರಣದಿಂದ ಕಸದ ಪ್ರಮಾಣ ತುಸು ಕಡಿಮೆಯಾಗಿದೆ ಎನ್ನಲಾಗುತ್ತಿದೆ.