* ಚಿಲ್ಲರೆ ಮಾರುಕಟ್ಟೆಯಲ್ಲಿನ ದರ ಏರಿಳಿತದಿಂದ ಬೆಳೆಗಾರರು ತೊಂದರೆಗೆ ಅನುಭವಿಸುತ್ತಾರೆ. ಆದ್ದರಿಂದ, ಟೊಮೆಟೊದಿಂದ ವೈನ್ ತಯಾರಿಕೆ ಸೇರಿದಂತೆ ಹೆಚ್ಚಿನ ಮೌಲ್ಯವರ್ಧನೆ ಮೂಲಕ ರೈತರಿಗೆ ಅನುಕೂಲ ಕಲ್ಪಿಸಲಾಗುವುದು ಎಂದು ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವಾಲಯ ತಿಳಿಸಿದೆ.* ಸಂಸ್ಕರಣಾ ಹಂತದಲ್ಲಿ ಟೊಮೆಟೊ ಪೂರೈಕೆಯನ್ನು ಸದೃಢಗೊಳಿಸುವ ಮೂಲಕ ವ್ಯಾಪಾರವನ್ನು ಅಭಿವೃದ್ಧಿಪಡಿಸಲಾಗುವುದು.* ಮೌಲ್ಯವರ್ಧನೆಗೆ ಮುಂದಾಗಿರುವ 28 ನವೋದ್ಯಮಗಳಿಗೆ  ಹಣಕಾಸಿನ ನೆರವು ನೀಡಲಾಗುವುದು " ಎಂದು ಹೇಳಿದೆ.* ಬೆಲೆ ಏರಿಕೆಗೆ ಕಡಿವಾಣ ಹಾಕಲು ಕಳೆದ ವರ್ಷದ ಜೂನ್‌ನಲ್ಲಿ 'ಟೊಮೆಟೊ ಗ್ರಾಂಡ್ ಚಾಲೆಂಜ್'ಗೆ (ಟಿಜಿಸಿ) ಆರಂಭಿಸಲಾಗಿತ್ತು.* ಟೊಮೆಟೊ ಪೂರೈಕೆ ಸರಪಳಿ ಸದೃಢಗೊಳಿಸುವಿಕೆ, ಗ್ರಾಹಕರಿಗೆ ಕೈಗೆಟುಕುವ ಬೆಲೆಯಲ್ಲಿ ಸರಕು ಪೂರೈಕೆಯಾಗುವಂತೆ ಮಾಡುವುದು ಹಾಗೂ ಬೆಳೆಗಾರರ ಉತ್ಪನ್ನಗಳಿಗೆ ಸೂಕ್ತ ಬೆಲೆ ಸಿಗುವಂತೆ  ಮಾಡುವುದು ಇದರ ಉದ್ದೇಶವಾಗಿದೆ ಎಂದು ವಿವರಿಸಿದೆ.* 'ಕೇಂದ್ರ ಶಿಕ್ಷಣ ಸಚಿವಾಲಯದ (ನಾವೀನ್ಯ ಕೋಶ) ಸಹಭಾಗಿತ್ವದಡಿ ಗ್ರಾಹಕ ವ್ಯವಹಾರಗಳ ಸಚಿವಾಲಯವು ಈ ಟಿಜಿಸಿ ರೂಪಿಸಿತ್ತು. ಮೌಲ್ಯವರ್ಧನೆ ಬಗ್ಗೆ ಹೊಸ ಕಲ್ಪನೆಗಳನ್ನು ಮಂಡಿಸಲು ವಿದ್ಯಾರ್ಥಿಗಳು, ಸಂಶೋಧನಾ ಸಂಸ್ಥೆಗಳು, ನವೋದ್ಯಮಗಳಿಗೆ ಆಹ್ವಾನ ನೀಡಲಾಗಿತ್ತು' ಎಂದು ಸಚಿವಾಲಯದ ಕಾರ್ಯದರ್ಶಿ ನಿಧಿ ಖರೆ ತಿಳಿಸಿದ್ದಾರೆ.* 1,376 ಹೊಸ ಕಲ್ಪನೆಗಳನ್ನು ಸ್ವೀಕರಿಸಲಾಗಿತ್ತು. ಈ ಪೈಕಿ 423 ಯೋಜನೆಗಳನ್ನು ಆಯ್ಕೆ ಮಾಡಲಾಗಿತ್ತು. ಅಂತಿಮವಾಗಿ 28 ನವೋದ್ಯಮಗಳು ಮಂಡಿಸಿರುವ ಯೋಜನೆಗಳ ಅನುಷ್ಠಾನಕ್ಕೆ ನಿರ್ಧರಿಸಲಾಗಿದೆ.* ಈ ಪೈಕಿ 14 ನವೋದ್ಯಮಗಳು ಪೇಟೆಂಟ್ ಹೊಂದಿವೆ' ಎಂದು ತಿಳಿಸಿದ್ದಾರೆ. ಸಚಿವಾಲಯವು ಈ ನವೋದ್ಯಮಗಳಿಗೆ ಆರ್ಥಿಕ ನೆರವು ನೀಡಲಿದೆ. ಹೂಡಿಕೆದಾರರ ಭೇಟಿಗೂ ಅವಕಾಶ ಕಲ್ಪಿಸಲಿದೆ. ಇದರಿಂದ ಅವರ ವ್ಯಾಪಾರ ವಹಿವಾಟು ಹೆಚ್ಚಳವಾಗಲಿದೆ ಎಂದು ತಿಳಿಸಿದ್ದಾರೆ.* ಭಾರತದಲ್ಲಿ ವಾರ್ಷಿಕವಾಗಿ 20 ದಶಲಕ್ಷ ಟನ್ ಟೊಮೆಟೊ ಬೆಳೆಯಲಾಗುತ್ತದೆ.