* ಭಾರತೀಯರಿಗೆ ವಾಸಿಸಲು, ಉದ್ಯೋಗ ಮಾಡಲು ಮತ್ತು ಸಂಶೋಧನೆ ಕೈಗೊಳ್ಳಲು ಅನುಕೂಲವಾಗುವ ಉದ್ದೇಶದಿಂದ ಆಸ್ಟ್ರೇಲಿಯಾ "ಮೊಬಿಲಿಟಿ ಅರೇಂಜ್‌ಮೆಂಟ್ ಫಾರ್ ಟ್ಯಾಲೆಂಟೆಡ್ ಅರ್ಲಿ-ಪ್ರೊಫೆಷನಲ್ಸ್ ಸ್ಕೀಮ್ (MATES)" ಎಂಬ ನೂತನ ಉಪಕ್ರಮವನ್ನು ಆರಂಭಿಸಿದೆ.* 2024 ರ ಡಿಸೆಂಬರ್ ನಿಂದ ಈ ಯೋಜನೆ ಜಾರಿಗೆ ಬರಲಿದ್ದು, ಉನ್ನತ ವಿಶ್ವ ವಿದ್ಯಾಲಯಗಳ ಪದವೀಧರರು, ಆರಂಭಿಕ ವೃತ್ತಿಪರರು ಅಂತರಾಷ್ತ್ರೀಯ ಸಂಬಂಧಗಳ(ಉಪವರ್ಗ) ಅಡಿಯಲ್ಲಿ ವೀಸಾಗೆ ನೋಂದಣಿ ಮಾಡಿಕೊಳ್ಳಬಹುದು.* ಈ ವೀಸಾದ ಜೊತೆಗೆ ವಯಕ್ತಿಕ ವೀಸಾ ಹೊಂದಿರುವ ಭಾರತೀಯ ಎಷ್ಟು ಬರಿ ಬೇಕಾದರೂ ಆಸ್ಟ್ರೇಲಿಯಾಗೆ ಪ್ರಯಾಣಿಸಬಹುದು. ಕುಟುಂಬದ ಸದಸ್ಯರನ್ನು ಕರೆದೊಯ್ಯಲು ಅವಕಾಶ ನೀಡಲಾಗಿದೆ.* ನವೀಕರಿಸಬಹುದಾದ ಶಕ್ತಿ, ಗಣಿಗಾರಿಕೆ, ಎಂಜಿನಿಯರಿಂಗ್, ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ, ಹಣಕಾಸು- ಕೃಷಿ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಅಧ್ಯಯನ ಕೈಗೊಳ್ಳಲು ಆಸ್ಟ್ರೇಲಿಯಾಗೆ ತೆರಳಬಹುದು.* ಅರ್ಜಿ ಸಲ್ಲಿಸಲು ಆಸಕ್ತಿ ಹೊಂದಿರುವ ಭಾರತೀಯರನ್ನು ಅರ್ಜಿ ಪೂರ್ವ ಮತದಾನದ ಮೂಲಕ ಆಯ್ಕೆ ಮಾಡಲಾಗುತ್ತದೆ. ಅಭ್ಯರ್ಥಿಯು ಮೊದಲಿಗೆ ಅರ್ಜಿ ಪೂರ್ವ ಮತಪೆತ್ರದಲ್ಲಿ ನೋಂದಣಿ ಮಾಡಿಕೊಳ್ಳಬೇಕು.* ಮತದಾನದಲ್ಲಿ ಆಯ್ಕೆಯಾದವರಿಗೆ ವೀಸಾಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗುತ್ತದೆ. ಮೊದಲ ಹಂತದ ಮತದಾನವು ಡಿಸೆಂಬರ್‌ನಲ್ಲಿ ಆರಂಭವಾಗಲಿದೆ.