* ಎಲಾನ್ ಮಸ್ಕ್ ಒಡೆತನದ ಸ್ಪೇಸ್ ಎಕ್ಸ್, ಇಸ್ರೋದ GSAT-N2 ಸ್ಯಾಟಲೈಟ್ ಕಮ್ಯೂನಿಕೇಶನ್ ಉಪಗ್ರಹ ಉಡಾವಣೆ ಮಾಡಿದೆ.* ಫ್ಲೋರಿಡಾದ ಕೆನವರಲ್ ಸ್ಪೇಸ್ ಫೋರ್ಸ್ ನಿಲ್ದಾಣದಿಂದ ಭಾರತದ ಉಪಗ್ರಹ ಯಶಸ್ವಿಯಾಗಿ ಉಡಾವಣೆ ಮಾಡಿದೆ. ಇದು ಇಸ್ರೋ ಹಾಗೂ ಸ್ಪೇಸ್ ಎಕ್ಸ್‌ನ ಮೊದಲ ಜಂಟಿ ಉಪಗ್ರಹ ಉಡಾವಣೆಯಾಗಿದೆ.* ಮಸ್ಕ್‌ ಅವರ ಏಜೆನ್ಸಿ ಸ್ಪೇಸ್‌ಎಕ್ಸ್ 34 ನಿಮಿಷಗಳ ಪ್ರಯಾಣದ ನಂತರ ಇಸ್ರೋದ ಉಪಗ್ರಹವನ್ನು ಸುರಕ್ಷಿತವಾಗಿ ಬಾಹ್ಯಾಕಾಶಕ್ಕೆ ಸಾಗಿಸಿತು. ಇದು ಸ್ಪೇಸ್‌ಎಕ್ಸ್‌ನ ಫಾಲ್ಕನ್ 9 ರಾಕೆಟ್‌ನ 396 ನೇ ಹಾರಾಟವಾಗಿರುವುದು ಗಮನಾರ್ಹವಾಗಿದೆ.* GSAT-N2 ಉಪಗ್ರಹವನ್ನು ಇಸ್ರೋ ಸ್ಯಾಟಲೈಟ್ ಸೆಂಟರ್ ಹಾಗೂ  ಲಿಕ್ವಿಡ್ ಪ್ರಪಲ್ಶನ್ ಸಿಸ್ಟಮ್ ಸೆಂಟರ್ ಅಭಿವೃದ್ಧಿಪಡಿಸಿದೆ. ಇದು 48 Gbps ಡೇಟಾ ಟ್ರಾನ್ಸ್‌ಮಿಶನ್ ಸಾಮರ್ಥ್ಯ ಹೊಂದಿದೆ. ಇದು ಬ್ರಾಂಡ್‌ಬ್ಯಾಂಡ್ ಕನೆಕ್ಷನ್ ಮತ್ತಷ್ಟು ವಿಸ್ತರಿಸಲಿದೆ.* ಈ ಉಪಗ್ರಹ ದೇಶಾದ್ಯಂತ ಇನ್ ಫ್ಲೈಟ್ ಇಂಟರ್ನೆಟ್ ಸೇವೆ ಒದಗಿಸಲಿದೆ. ವಿಮಾನದಲ್ಲಿ ಪ್ರಯಾಣಿಸುವಾಗ ವೈಫೈ ಸೇರಿದಂತೆ ಇಂಟರ್ನೆಟ್  ಸಂಪರ್ಕ ಸುಲಭವಾಗಿ ಸಿಗಲಿದೆ.* ಉಡಾವಣೆ ಮಾಡಿರುವ ಉಪಗ್ರಹ 14 ವರ್ಷ ಕಾರ್ಯನಿರ್ವಹಿಸಲಿದೆ. ಉಹಗ್ರಹ ವಿವಿದ ಸ್ಪಾಟ್ ಬೀಮ್ ಬಳಕೆ ಮಾಡಿದೆ. ಇದರಿಂದ ಬ್ರಾಂಡ್‌ಬ್ಯಾಂಡ್ ಸೇವೆಗಳು ಪರಿಣಾಮಕಾರಿಯಾಗಿ ಲಭಿಸಲಿದೆ ಎಂದು ಇಸ್ರೋ ಹೇಳಿದೆ.