* ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆ(PMMVY) ಯಡಿಯಲ್ಲಿ ಕರ್ನಾಟಕದ 20.72 ಲಕ್ಷ ಮಾತೃ ಫಲಾನುಭವಿಗಳಾಗಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಸ್ಮೃತಿ ಇರಾನಿ ಅವರು ಲೋಕಸಭೆಯಲ್ಲಿ ತಿಳಿಸಿದ್ದಾರೆ.* ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆ (PMMVY) ದೇಶದ ಎಲ್ಲಾ ಜಿಲ್ಲೆಗಳಲ್ಲಿ ಜನವರಿ 1, 2017 ರಿಂದ ಜಾರಿಗೆ ಬರುವಂತೆ ಮಾತೃ ವಂದನಾ ಯೋಜನೆ ಪ್ರಯೋಜನ ಕಾರ್ಯಕ್ರಮವಾಗಿದೆ. * ದೇಶದಲ್ಲಿ ಇಲ್ಲಿಯ ತನಕ 3.36 ಕೋಟಿ ಜನರು ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆಯ ಲಾಭ ಪಡೆಯಲಾಗಿದ್ದು, ಈ ಯೋಜನೆಗೆ ಕೇಂದ್ರದಿಂದ ಕರ್ನಾಟಕಕ್ಕೆ 615 ಕೋಟಿ ಬಿಡುಗಡೆ ಮಾಡಲಾಗಿದೆ.