* ಮಾಲ್ಡೀವ್ಸ್ ಮತ್ತು ಭಾರತದ ನಡುವೆ ರಾಜತಾಂತ್ರಿಕ ಬಿಕ್ಕಟ್ಟು ಆರಂಭವಾದ ಬಳಿಕ ದ್ವೀಪರಾಷ್ಟ್ರಕ್ಕೆ ಭೇಟಿ ನೀಡುವ ಭಾರತದ ಪ್ರವಾಸಿಗರ ಸಂಖ್ಯೆ ಇಳಿಮುಖವಾಗಿದೆ.* ಮಾಲ್ಡೀವ್ಸ್ ಗೆ ಭೇಟಿ ನೀಡುವ ವಿದೇಶಿಗರಲ್ಲಿ ಭಾರತದ ಪ್ರವಾಸಿಗರು ಅಗ್ರಸ್ಥಾನದಲ್ಲಿದ್ದರು.* ಇತ್ತೀಚಿನ ಅಧಿಕೃತ ಅಂಕಿ ಅಂಶಗಳ ವರದಿಯ ಪ್ರಕಾರ ಕಳೆದ ಮೂರೂ ವಾರಗಳಲ್ಲಿ ಭಾರತದ ಪ್ರವಾಸಿಗರ ಸಂಖ್ಯೆ 5ನೇ ಸ್ಥಾನಕ್ಕೆ ಕುಸಿತ ಕಂಡು ಬಂದಿದೆ.* ಮಾಲ್ಡೀವ್ಸ್ ಗೆ ಭೇಟಿ ನೀಡುವ ವಿದೇಶಿಗರಲ್ಲಿ ರಷ್ಯಾ ಮೊದಲನೇ ಸ್ಥಾನದಲ್ಲಿದೆ, ಇಟಲಿ, ಚೀನಾ, ಮತ್ತು ಬ್ರಿಟನ್ ನಂತರದ ಸ್ಥಾನದಲ್ಲಿವೆ.* ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಜು ಅವರು ಭಾರತದ ಜನರು ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಕ್ಷಮೆಯಾಚಿಸಬೇಕು ಎಂಬ ಒತ್ತಡ ಹೆಚ್ಚಿದೆ. ಚೀನಾ ಪರ ಧೋರಣೆ ಹೊಂದಿರುವ ಮುಯಿಜು, ಈಚೆಗೆ ಭಾರತ ವಿರೋಧಿ ಹೇಳಿಕೆಗಳನ್ನು ನೀಡಿದ್ದರು. ಇದರಿಂದ ಉಭಯ ದೇಶಗಳ ನಡುವಣ ಬಾಂಧವ್ಯಕ್ಕೆ ಧಕ್ಕೆ ಉಂಟಾಗಿದೆ.* 'ಮುಯಿಜು ಭಾರತದ ಕ್ಷಮೆಯಾಚಿಸಿ, ಎರಡೂ ದೇಶಗಳ ನಡುವಿನ ರಾಜತಾಂತ್ರಿಕ ಸಂಬಂಧ ಉತ್ತಮಪಡಿಸಲು ಮುಂದಾಗಬೇಕು' ಎಂದು ಜಂಹೂರಿ ಪಕ್ಷದ ನಾಯಕ ಗಸೂಮ್ ಇಬ್ರಾಹಿಂ ಆಗ್ರಹಿಸಿದ್ದಾರೆ.* ಮಾಲ್ಡೀವ್ಸ್ ನ ಮೂವರು ಉಪ ಸಚಿವರು, ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಅವಹೇಳನಕಾರಿ ಮಾತುಗಳನ್ನು ಆಡಿದ್ದರು. * ಭಾರತೀಯರು ಮಾಲ್ಡೀವ್ಸ್ ನ  ಬದಲು ದೇಶಿ ಪ್ರವಾಸಿ ತಾಣಗಳ ಕಡೆ ಗಮನ ಹರಿಸಬೇಕು ಎಂದು ಸೆಲೆಬ್ರಿಟಿಗಳು ಸೇರಿದಂತೆ ಹಲವರು ನೀಡಿದ್ದರು