* ಲಾಸ್ಯಾನ್‌ನಲ್ಲಿ ನಡೆಯುತ್ತಿರುವ 2024ರ ಸಾಲಿನ ಲೌಸನ್ನೆ ಡೈಮಂಡ್‌ ಲೀಗ್‌ ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದ ಹಾಲಿ ವಿಶ್ವ ಚಾಂಪಿಯನ್ ಭಾರತದ ಸ್ಟಾರ್ ಜಾವೆಲಿನ್ ಎಸೆತಗಾರ ನೀರಜ್‌ ಪುರುಷರ ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ಭರ್ಜಿಯನ್ನು 89.49 ಮೀ. ದೂರಕ್ಕೆ ಎಸೆಯುವ ಮೂಲಕ 2ನೇ ಸ್ಥಾನ ಪಡೆದಿದ್ದಾರೆ. ಈ ಮೂಲಕ ಗೋಲ್ಡನ್‌ ಬಾಯ್‌ ನೀರಜ್ ಚೋಪ್ರಾ ತಮ್ಮ ಸಾಧನೆಯ ಕಿರೀಟಕ್ಕೆ ಮತ್ತೊಂದು ಗರಿ ಏರಿಸಿಕೊಂಡಿದ್ದಾರೆ.  * ಗ್ರೇನಡಾದ ಆಂಡರ್ಸನ್ ಪೀಟರ್ಸ್ 90.61ಮೀ. ನೀರಜ್ ಚೋಪ್ರಾ 89.49ಮೀ., ಹಾಗೂ ಜರ್ಮನಿಯ ಜೂಲಿಯಸ್ ವೇಬರ್ 87.08ಮೀ. ಎಸೆಯುವ ಮೂಲಕ ಅನುಕ್ರಮವಾಗಿ ಮೊದಲ ಮೂರು ಸ್ಥಾನಗನ್ನು ಪಡೆದುಕೊಂಡಿದ್ದಾರೆ.* 26 ವರ್ಷದ ನೀರಜ್ ಚೋಪ್ರಾ ದೀರ್ಘಕಾಲದ ತೊಡೆಸಂದು ಗಾಯದ ಸಮಸ್ಯೆಯ ನಡುವೆಯೂ ಸ್ಪರ್ಧೆಯಲ್ಲಿ ಕಣಕ್ಕಿಳಿದರು. ಆರಂಭಿಕ ಸುತ್ತುಗಳಲ್ಲಿ ಸಾಧಾರಣ ಪ್ರದರ್ಶನ ನೀಡಿದರು. ಪ್ಯಾರಿಸ್‌ನಲ್ಲಿ ರಜತ ಪದಕಕ್ಕೆ ಕೊರಳೊಡ್ಡಿರುವ ನೀರಜ್, ಮೊದಲ ಪ್ರಯತ್ನದಲ್ಲಿ 82.10 ಮೀಟರ್ ದೂರದ ಎಸೆತದೊಂದಿಗೆ ಸ್ಪರ್ಧೆ ಆರಂಭಿಸಿದರು. 2ನೇ ಪ್ರಯತ್ನದಲ್ಲಿ 83.21 ಮೀಟರ್, 3 ನೇ ಪ್ರಯತ್ನದಲ್ಲಿ 83.13 ಮೀ. 4 ನೇ ಪ್ರಯತ್ನದಲ್ಲಿ 82.24 ಮೀಟರ್ ದೂರದ ಎಸೆತದೊಂದಿಗೆ ಎಂಟು ಸ್ಪರ್ಧಿಗಳ ನಡುವೆ 4ನೇ ಸ್ಥಾನದಲ್ಲಿ ಉಳಿದರು.* 2018ರಿಂದಲೂ ಡೈಮಂಡ್ ನ ಲೀಗ್‌ನಲ್ಲಿ ಸ್ಪರ್ಧಿಸುತ್ತಿರುವ ನೀರಜ್ ಪ್ರತಿ ಬಾರಿ ಕಣಕ್ಕಿಳಿದಾಗಲೂ ಅಗ್ರ 3ರಲ್ಲಿ ಸ್ಥಾನ ಪಡೆದಿದ್ದಾರೆ.