Job Description: ➤ ಭಾರತ ಮತ್ತು ಚೀನಾ ಗಡಿಗೆ ಹೊಂದಿಕೊಂಡಂತಿರುವ ಲಡಾಖ್‌ನ ಆಯಕಟ್ಟಿನ ಪ್ರದೇಶವೊಂದು ದೇಶದ ಹೆಮ್ಮೆಯ ಮೈಲಿಗಲ್ಲಿಗೆ ಸಾಕ್ಷಿಯಾಗಿದೆ. ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ವೈಬ್ರೆಂಟ್ ವಿಲೇಜಸ್ ಪ್ರೋಗ್ರಾಂ (Vibrant Villages Programme - VVP) ಅಡಿಯಲ್ಲಿ ಪೂರ್ವ ಲಡಾಖ್‌ನ 'ಚುಮೂರ್' (Chumur) ಗ್ರಾಮವನ್ನು ಭಾರತದ ಅತ್ಯಂತ ಮೊದಲ 'ಮಾದರಿ ಗಡಿ ಗ್ರಾಮ'ವನ್ನಾಗಿ (Model Border Village) ಅಭಿವೃದ್ಧಿಪಡಿಸಲಾಗುತ್ತಿದೆ. ಸಮುದ್ರ ಮಟ್ಟದಿಂದ 16,700 ಅಡಿ ಎತ್ತರದಲ್ಲಿರುವ ಪೂರ್ವ ಲಡಾಖ್‌ನ ಚೀನಾ ಗಡಿ ಭಾಗದ ಚುಮೂರ್ ಗ್ರಾಮದಲ್ಲಿ ಕೇವಲ 24 ಮನೆಗಳಿದ್ದು, ಇಲ್ಲಿನ 91 ನಿವಾಸಿಗಳ ಪ್ರಮುಖ ಜೀವನೋಪಾಯ ಪ್ರಾಣಿ ಸಾಕಣೆ ಮತ್ತು ವಿಶ್ವಪ್ರಸಿದ್ಧ 'ಪಶ್ಮಿನಾ' ಉಣ್ಣೆಯ ಉತ್ಪಾದನೆಯಾಗಿದೆ. ➤ ವೈಬ್ರೆಂಟ್ ವಿಲೇಜಸ್ ಪ್ರೋಗ್ರಾಂ: ಭಾರತದ ಗಡಿ ಭಾಗದಲ್ಲಿರುವ ಗ್ರಾಮಗಳಿಂದ ಜನರು ವಲಸೆ ಹೋಗುವುದನ್ನು ತಡೆಯಲು ಮತ್ತು ಅಲ್ಲಿನ ಮೂಲಸೌಕರ್ಯಗಳನ್ನು ಬಲಪಡಿಸಲು ಕೇಂದ್ರ ಸರ್ಕಾರ ಈ ಯೋಜನೆಯನ್ನು ಜಾರಿಗೆ ತಂದಿದೆ. ಇದು ಸಂಪೂರ್ಣವಾಗಿ ಕೇಂದ್ರ ಸರ್ಕಾರದ ಧನಸಹಾಯದೊಂದಿಗೆ ನಡೆಯುವ ಯೋಜನೆಯಾಗಿದೆ (Central Sector Scheme). ಇದರ ಮೊದಲ ಹಂತದಲ್ಲಿ ದೇಶಾದ್ಯಂತ 10 ಮಾದರಿ ಗಡಿ ಗ್ರಾಮಗಳನ್ನು ಅಭಿವೃದ್ಧಿಪಡಿಸುವ ಗುರಿ ಹೊಂದಲಾಗಿದೆ. ಆ ಹತ್ತರಲ್ಲಿ ಲಡಾಖ್‌ನ ಚುಮೂರ್ ಮೊದಲನೆಯದಾಗಿದೆ. ನಾಗರಿಕ ಮತ್ತು ರಕ್ಷಣಾ ವ್ಯವಸ್ಥೆಯನ್ನು ಸಮನ್ವಯಗೊಳಿಸುವುದು (Civilian-Defence Integration) ಇದರ ಪ್ರಮುಖ ಉದ್ದೇಶವಾಗಿದೆ. ➤ ಚುಮೂರ್ ಮಾದರಿ ಗ್ರಾಮದ ವಿಶೇಷತೆಗಳು: ಸೋಲಾರ್ ಮನೆಗಳು (Passive Solar Houses): ಇಲ್ಲಿ ಮೈನಸ್ 35 ಡಿಗ್ರಿ ಸೆಲ್ಸಿಯಸ್ (-35°C) ಚಳಿ ಇರುತ್ತದೆ. ಇದನ್ನು ತಡೆದುಕೊಳ್ಳಲು ದಕ್ಷಿಣಾಭಿಮುಖವಾದ ವಿಶೇಷ ಪರಿಸರಸ್ನೇಹಿ ಸೌರಶಕ್ತಿ ಮನೆಗಳನ್ನು ನಿರ್ಮಿಸಲಾಗುತ್ತಿದೆ. ಇವುಗಳನ್ನು ಸೆಪ್ಟೆಂಬರ್ 2026 ರೊಳಗೆ ಪೂರ್ಣಗೊಳಿಸುವ ಗುರಿ ಇದೆ. ಪ್ರವಾಸೋದ್ಯಮ ಮತ್ತು ಹೋಂಸ್ಟೇ: ಪ್ರತಿ ಮನೆಯಲ್ಲೂ ಪ್ರವಾಸಿಗರಿಗಾಗಿ ಪ್ರತ್ಯೇಕ ಹೋಂಸ್ಟೇ ರೂಮ್ ಹಾಗೂ ಕಮ್ಯುನಿಟಿ ಕೆಫೆಗಳನ್ನು ನಿರ್ಮಿಸಲಾಗುತ್ತಿದೆ. ಇದನ್ನು 'ಕೊರ್ಜೋಕ್-ಹಾನ್ಲೆ' (Korzok–Hanle) ಪ್ರವಾಸಿ ಸರ್ಕ್ಯೂಟ್ ಒಳಗೆ ತರಲಾಗುತ್ತಿದೆ. ಹಸಿರುಮನೆ ಕೃಷಿ (Greenhouse Cultivation): ಡಿಹಾರ್ (DIHAR - Defence Institute of High-Altitude Research) ಸಂಸ್ಥೆಯ ತಾಂತ್ರಿಕ ನೆರವಿನೊಂದಿಗೆ, ಚಳಿಗಾಲದಲ್ಲೂ ತಾಜಾ ತರಕಾರಿ ಬೆಳೆಯಲು ಕಮರ್ಷಿಯಲ್ ಗ್ರೀನ್‌ಹೌಸ್ ನಿರ್ಮಿಸಲಾಗುತ್ತಿದೆ. ಇತರ ಸೌಲಭ್ಯಗಳು: ಡಿಜಿಟಲ್ ಕನೆಕ್ಟಿವಿಟಿ (ಇಂಟರ್ನೆಟ್), ಪ್ರಾಥಮಿಕ ಆರೋಗ್ಯ ಕೇಂದ್ರ (PHC), ಶುದ್ಧ ನೀರು ಮತ್ತು ನವೀಕರಿಸಬಹುದಾದ ವಿದ್ಯುತ್ ವ್ಯವಸ್ಥೆ. ಪ್ರತಿ ದಿನದ ಉದ್ಯೋಗ ಮಾಹಿತಿ ಅಪ್ಡೇಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ