* ಕ್ಯೂಎಸ್(ಕ್ವಾಕರೆಲ್ಲಿ ಸೈಮಂಡ್ಸ್) ವರ್ಲ್ಡ್ ಯೂನಿವರ್ಸಿಟಿ ರ‍್ಯಾಂಕಿಂಗ್‌ ಪಟ್ಟಿ ಬಿಡುಗಡೆಯಾಗಿದ್ದು, ಏಷ್ಯಾ ವಲಯದಲ್ಲಿ ಭಾರತದ 22 ಉನ್ನತ ಶಿಕ್ಷಣ ಸಂಸ್ಥೆಗಳು ಅಗ್ರ 100ರ ಪಟ್ಟಿಯಲ್ಲಿ ಸ್ಥಾನ  ಪಡೆದುಕೊಂಡಿವೆ.* ಭಾರತದಲ್ಲಿ ದೆಹಲಿ ಐಐಟಿ ಅಗ್ರಸ್ಥಾನ ಪಡೆದುಕೊಂಡಿದೆ. ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ(ಐಐಎಸ್‌ಸಿ) 5ನೇ ಬ್ಯಾಂಕ್ ಪಡೆದುಕೊಂಡಿದೆ.* ಕ್ವಾಕರೆಲ್ಲಿ ಸೈಮಂಡ್ಸ್(ಕ್ಯೂಎಸ್) ವರದಿಯ ಪ್ರಕಾರ ಏಷ್ಯಾ ವಲಯದಲ್ಲಿ ಒಟ್ಟು 984 ಶಿಕ್ಷಣ ಸಂಸ್ಥೆಗಳು ಈ ಪಟ್ಟಿಯಲ್ಲಿವೆ. ಭಾರತದ 22ರ ಪೈಕಿ ಏಳು ಸಂಸ್ಥೆಗಳು ಟಾಪ್ ನೂರರಲ್ಲಿವೆ.* ಐಐಟಿ ದೆಹಲಿ 44ನೇ ಸ್ಥಾನದಲ್ಲಿದ್ದು, ಐಐಟಿ ಬಾಂಬೆಯಿಂದ ಅಗ್ರಸ್ಥಾನವನ್ನು ಕಸಿದುಕೊಂಡಿದೆ. ಐಐಟಿ ಬಾಂಬೆ ಹಿಂದಿನ ವರ್ಷದ 40ನೇ ಸ್ಥಾನದಿಂದ 48ನೇ ಸ್ಥಾನಕ್ಕೆ ಭಾರಿ ಕುಸಿತವನ್ನು ಕಂಡಿದೆ.* ದಕ್ಷಿಣ ಏಷ್ಯಾ ವಲಯ ಪರಿಗಣಿಸಿದಲ್ಲಿ ಇದರಲ್ಲಿ ಭಾರತ ಮತ್ತು ಪಾಕಿಸ್ತಾನ ಒಳಗೊಂಡಿದ್ದು, ಈ ಪ್ರದೇಶದಲ್ಲಿ ಭಾರತದ ಒಟ್ಟು ಏಳು ವಿವಿಗಳು ಟಾಪ್‌ ಟೆನ್‌ನಲ್ಲಿವೆ. ಒಟ್ಟಾರೆ 308 ಶಿಕ್ಷಣ ಸಂಸ್ಥೆಗಳ ಪೈಕಿ ಐಐಟಿ ದೆಹಲಿಯೇ ಮೊದಲ ಸ್ಥಾನದಲ್ಲಿದೆ.* ಭಾರತದ ಅಗ್ರ ಸಂಸ್ಥೆಗಳ ರ‍್ಯಾಂಕಿಂಗ್‌ ನಲ್ಲಿ ತೀವ್ರ ಕುಸಿತ ಕಂಡಿದೆ. ದೆಹಲಿ ಐಐಟಿ ಮಾತ್ರ ಇದಕ್ಕೆ ಅಪವಾದವಾಗಿದೆ. ಕಳೆದ ವರ್ಷ 46 ನೇ ಸ್ಥಾನದಲ್ಲಿದ್ದದ್ದು ಈ ಬಾರಿ 44 ಕ್ಕೆ ಏರಿದೆ. ಐಐಟಿ  ಬಾಂಬೆ ಎಂಟು ಸ್ಥಾನ ಕೆಳಕ್ಕಿಳಿದಿದೆ. ಐಐಟಿ ಮದ್ರಾಸ್ ಮೂರು, ಐಐಟಿ ಖರಗ್‌ಪುರ ಒಂದು ಹಾಗೂ ಐಐಎಸ್‌ಸಿ ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಎರಡು ಸ್ಥಾನ ಕೆಳಕ್ಕೆ ಇಳಿದಿದೆ.ಏಷ್ಯಾದ ಅಗ್ರ ಶ್ರೇಯಾಂಕಿತರು1. ಪೀಕಿಂಗ್ ಯೂನಿವರ್ಸಿಟಿ- ಚೀನಾ2. ಯೂನಿವರ್ಸಿಟಿ ಆಫ್ ಹಾಂಗ್‌ಕಾಂಗ್3. ನ್ಯಾಷನಲ್ ಯೂನಿವರ್ಸಿಟಿ ಆಫ್ ಸಿಂಗಾಪುರ4. ನ್ಯಾನ್‌ಯಾಂಗ್ ಟೆಕ್ನಾಲಾಜಿಕಲ್ ಯೂನಿವರ್ಸಿಟಿ, ಸಿಂಗಾಪುರ.5. ಪುಡಾನ್ ಯೂನಿವರ್ಸಿಟಿ, ಚೀನಾದೇಶದ ಟಾಪ್ 10 ಸಂಸ್ಥೆಗಳು    ಸಂಸ್ಥೆ                         ರ‍್ಯಾಂಕ್           1. ಐಐಟಿ ದೆಹಲಿ                44 2. ಐಐಟಿ ಬಾಂಬೆ               483. ಐಐಟಿ ಮದ್ರಾಸ್            564.ಐಐಟಿ ಖಾರಗಪುರ್         605.ಐಐಸ್ ಸಿ ಬೆಂಗಳೂರು     626.ಐಐಟಿ ಕಾನ್ಪುರ್              677.ದೆಹಲಿ ಯೂನಿವರ್ಸಿಟಿ    818.ಐಐಟಿ ಗುವಾಹಟಿ           1049.ಐಐಟಿ ರೂರ್ಕಿ                 10810.ಜೆಎನ್ ಯು ದೆಹಲಿ       110