* ಜಗತ್ತನ್ನು ಕಾಡುತ್ತಿರುವ ಕ್ಯಾನ್ಸರ್ ರೋಗಕ್ಕೆ ಬ್ರಿಟನ್‌ನಲ್ಲಿ ಹೊಸ ಲಸಿಕೆ ಅಭಿವೃದ್ಧಿಪಡಿಸಲಾಗಿದ್ದು, ಪ್ರಾಯೋಗಿಕವಾಗಿ ಲಸೀಕಿಕರಣ ಆರಂಭಿಸಲಾಗಿದೆ.* ಕ್ಯಾನ್ಸರ್ ಕಣಗಳನ್ನು ನಿಯಂತ್ರಿಸಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಅಭಿವೃದ್ಧಿಪಡಿಸಿರುವ ಹೊಸ ಲಸಿಕೆಯ ಪ್ರಾಯೋಗಿಕ ಪರೀಕ್ಷೆಯನ್ನು ಬ್ರಿಟನ್‌ನ ಹಮ್ಮರ್‌ಸ್ಮಿತ್ ಆಸ್ಪತ್ರೆಯಲ್ಲಿ ಕೈಗೊಳ್ಳಲಾಗಿದೆ.* ಎಂಆರ್ ಎನ್ ಎ-4359 ಹೆಸರಿನ ಕ್ಯಾನ್ಸರ್ ಚಿಕಿತ್ಸೆಗೆ ಲಸಿಕೆ ಅಭಿವೃದ್ಧಿಪಡಿಸಲಾಗಿದ್ದು, ಬ್ರಿಟನ್‌ನಲ್ಲಿ ಕೆಲವು ಕ್ಯಾನ್ಸ‌ರ್ ರೋಗಿಗಳಿಗೆ ನೀಡಲಾಗಿದೆ. ಕೋವಿಡ್ ಸೋಂಕಿಗೆ ಲಸಿಕೆ ಅಭಿವೃದ್ಧಿಪಡಿಸಿದ ಮಾದರಿಯಲ್ಲೇ ಕ್ಯಾನ್ಸ‌ರ್ ನಿವಾರಣೆಗೆ ಎಂಆರ್‌ಎನ್‌ಎ ಲಸಿಕೆ ಅಭಿವೃದ್ಧಿಗೊಳಿಸಲಾಗಿದೆ. * ಈ ಲಸಿಕೆಯನ್ನು ಇಂಪೀರಿಯಲ್ ಕಾಲೇಜ್ ಎನ್‌ಎಚ್ಎಸ್ ಹೆಲ್ತ್ ಕೇರ್ ಟ್ರಸ್ಟ್ ನಲ್ಲಿ ಹಾಗೂ ಬ್ರಿಟನ್ ಸರಕಾರದ ಸಹಯೋಗದಲ್ಲಿ ಮಾಡೆರ್ನಾ ಫಾರ್ಮಾಸ್ಯುಟಿಕಲ್ ಕಂಪನಿ ಲಸಿಕೆ ರೂಪಿಸಿದೆ.* ಮೊಬಿಲೈಜ್ ಪ್ರಯೋಗವು ಲಂಡನ್‌ನ ಇಂಪೀರಿಯಲ್ ಕಾಲೇಜ್ ಮತ್ತು ಇಂಪೀರಿಯಲ್ ಕಾಲೇಜ್ ಹೆಲ್ತ್‌ಕೇರ್ NHS ಟ್ರಸ್ಟ್‌ನ ಪಾಲುದಾರಿಕೆಯಲ್ಲಿ ನಡೆಸಲ್ಪಡುತ್ತದೆ, ಹ್ಯಾಮರ್ಸ್ಮಿತ್ ಆಸ್ಪತ್ರೆಯಲ್ಲಿ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಫಾರ್ ಹೆಲ್ತ್ ಅಂಡ್ ಕೇರ್ ರಿಸರ್ಚ್ (NIHR) ಇಂಪೀರಿಯಲ್ ಕ್ಲಿನಿಕಲ್ ರಿಸರ್ಚ್ ಫೆಸಿಲಿಟಿಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ.