* 17 ವರ್ಷದ ಗ್ರ್ಯಾಂಡ್ ಮಾಸ್ಟರ್ ಡಿ ಗುಕೇಶ್ ಟೊರೊಂಟೊದಲ್ಲಿ ನಡೆದ ವಿಶ್ವ ಚೆಸ್‌ ಒಕ್ಕೂಟದ (FIDE) ಕ್ಯಾಂಡಿಡೇಟ್ಸ್ ಪಂದ್ಯಾವಳಿಯಲ್ಲಿ ಗೆದ್ದು ಇತಿಹಾಸ ನಿರ್ಮಿಸಿದ್ದಾನೆ. ಡಿ ಗುಕೇಶ್ ಅವರು  ಕ್ಯಾಂಡಿಡೇಟ್ಸ್ ಚೆಸ್ ಟೂರ್ನಿ ಗೆದ್ದ ವಿಶ್ವದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆ ಪಾತ್ರನಾಗಿದ್ದಾನೆ. ಈ ಮೂಲಕ 40ವರ್ಷದ ಹಿಂದೆ ಗ್ಯಾರಿ ಕ್ಯಾಸ್ಪರೋವ್ ನಿರ್ಮಿಸಿದ್ದ ದಾಖಲೆಯನ್ನು ಮುರಿದಿದ್ದಾರೆ.* ಭಾರತದ ಚೆಸ್ ಗ್ರ್ಯಾಂಡ್‌ ಮಾಸ್ಟರ್ ಡಿ ಗುಕೇಶ್ 9/14 ಅಂಕಗಳನ್ನು ಗಳಿಸುವ ಮೂಲಕ ಮೊದಲ ಸ್ಥಾನವನ್ನು ತಮ್ಮದಾಗಿಸಿಕೊಂಡರು. ಇದರೊಂದಿಗೆ  5 ಬಾರಿಯ ವಿಶ್ವ ಚಾಂಪಿಯನ್ ವಿಶ್ವನಾಥನ್ ಆನಂದ್ ಬಳಿಕ ಕ್ಯಾಂಡಿಡೇಟ್ಸ್ ಗೆದ್ದ ಎರಡನೇ ಭಾರತೀಯ ಎಂಬ ಹಿರಿಮೆಗೆ  ಗುಕೇಶ್ ಅವರು ಪಾತ್ರರಾಗಿದ್ದಾರೆ. 2014 ರಲ್ಲಿ ವಿಶ್ವನಾಥನ್ ಆನಂದ್ ಅವರು ಕ್ಯಾಂಡಿಡೇಟ್ ಚೆಸ್ ಸ್ಪರ್ಧೆಯನ್ನು ಗೆದಿದ್ದರು.* ವಿಶ್ವ ಚೆಸ್ ಚಾಂಪಿಯನ್ ಆಗುವತ್ತ ಮಹತ್ವದ ಹೆಜ್ಜೆ ಇಟ್ಟಿರುವ ಗುಕೇಶ್‌ ಈ ವರ್ಷದ ಕೊನೆಯಲ್ಲಿ ಚೀನಾದ ಚೆಸ್‌ ಗ್ರಾಂಡ್‌ಮಾಸ್ಟರ್‌ ಡಿಂಗ್ ಲಿರೆನ್ ಅವರನ್ನು ಎದುರಿಸಲಿದ್ದಾರೆ.  * ಕ್ಯಾಂಡಿಡೇಟ್ ಚೆಸ್ ಟೂರ್ನಿಯ ಓಪನ್ ವಿಭಾಗದ ಅಂತಿಮ ಸ್ಥಾನಗಳು - ಪುರುಷರ ವಿಭಾಗದ ಅಂತಿಮ ಸ್ಥಾನಗಳು :1. ಡಿ.ಗುಕೇಶ್ 2. ನಕಾಮುರಾ3. ನಿಪೊಮ್‌ನಿಷಿ4. ಕರುವಾನ 5. ಪ್ರಜ್ಞಾನಂದ 6. ವಿದಿತ್ ಗುಜರಾತಿ 7. ಅಲಿರೇಝಾ ಫಿರೋಜ್ 8. ಅಬಸೋವ್- ಮಹಿಳಾ ವಿಭಾಗದ ಅಂತಿಮ ಸ್ಥಾನಗಳು :1. ಝಂಗ್‌ಯಿ ತಾನ್2. ಕೋನೇರು ಹಂಪಿ3. ಟಿಂಗ್ಲೀ ಲೀ4. ವೈಶಾಲಿ ಆರ್.5. ಅಲೆಕ್ಸಾಂಡ್ರಾ ಗೊರ್ಯಾಚೈನಾ6. ಕ್ಯಾಥೆರಿನಾ ಲಾಗ್ನಿ7. ಸಲಿಮೋವಾ 8. ಅನ್ನಾ ಮುಝಿಚುಕ್