* ಕೃತಕ ಬುದ್ದಿಮತ್ತೆಯ ಜಾಗತಿಕ ಪಾಲುದಾರಿಕೆಯ ಶೃಂಗಸಭೆ -2023 ನವದೆಹಲಿಯಲ್ಲಿ 2023 ಡಿಸೆಂಬರ್ 12 ರಿಂದ 14 ವರೆಗೆ ನಡೆಯಿತು. ಪ್ರಧಾನಿ ನರೇಂದ್ರ ಮೋದಿಯವರು ಈ ಸಭೆಯನ್ನು  ಉದ್ಘಾಟಿಸಿದರು. * ಕೃತಕ ಬುದ್ಧಿಮತ್ತೆಯ ತತ್ವ ಮತ್ತು ಆಚರಣೆ ನಡುವಿನ ಅಂತರವನ್ನು ತಗ್ಗಿಸುವುದು ಜಿಪಿಎಐ ಗುರಿಯಾಗಿದೆ. * ಗೇಮ್‌ ಚೇಂಜ‌ರ್ ಪ್ರಶಸ್ತಿ: ಇಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ, ಶೃಂಗಸಭೆಯ ಭಾಗವಾಗಿ ಎಐ ಗೇಮ್‌ಚೇಂಜರ್ ಪ್ರಶಸ್ತಿಯನ್ನು ಪ್ರಾಯೋಜಿಸಿತ್ತು. ವಿವಿಧ ಕ್ಷೇತ್ರಗಳಲ್ಲಿ ಆವಿಷ್ಕಾರಕ ಪರಿಹಾರಗಳನ್ನು ಗುರುತಿಸಿ ಅವುಗಳನ್ನು ಗೌರವಿಸುವುದು ಇದರ ಉದ್ದೇಶವಾಗಿತ್ತು. * ಎಐ ಗೇಮ್‌ ಚೇಂಜರ್ ಪ್ರಶಸ್ತಿಗೆ  ಸೆಪ್ಟೆಂಬರ್ 12ರಿಂದ ನವೆಂಬರ್ 15ರ ವರೆಗೆ ಪ್ರಶಸ್ತಿಗೆ ಅರ್ಜಿ ಸಲ್ಲಿಸಲು ಕಾಲಾವಕಾಶ ನೀಡಲಾಗಿತ್ತು. ಅಕಾಡೆಮಿಯಾ ಮತ್ತು ಕೈಗಾರಿಕಾ ರಂಗದ ಪ್ರತಿನಿಧಿಗಳನ್ನು ಒಳಗೊಂಡ ಪರಿಶೀಲನಾ ಸಮಿತಿಯೊಂದು ಸ್ಟಾರ್ಟಪ್‌ಗಳ ಆವಿಷ್ಕಾರಕ ಪರಿಹಾರಗಳ ಮೌಲ್ಯಮಾಪನ ಮಾಡಿ 10 ಅಗ್ರ ರ್ಟಪ್‌ಗಳನ್ನು ಪ್ರಶಸ್ತಿಗಾಗಿ ಆಯ್ಕೆ ಮಾಡಿತ್ತು. ಈ ಸ್ಟಾರ್ಟಪ್‌ಗಳು ವಿವಿಧ ಕ್ಷೇತ್ರಗಳಲ್ಲಿ ಸುಭದ್ರ ಹಾಗೂ ಸುರಕ್ಷಿತ ಎಐ ಅಭಿವೃದ್ಧಿಯಲ್ಲಿ ಮುನ್ನಡೆಯನ್ನು ಸಾಧಿಸಿದ್ದು ಪ್ರಶಸ್ತಿಗೆ ಭಾಜನವಾಗಿವೆ.* ಪ್ರಶಸ್ತಿಗೆ ಆಯ್ಕೆಯಾದ 10 ಅಗ್ರ ರ್ಟಪ್‌ಗಳನ್ನು ಪ್ರಶಸ್ತಿಗೆ : ಅರೀತೆ ಬಿಸಿನೆಸ್ ಸಲ್ಯುಷನ್ಸ್, ಡೋನಾಮ್ಯಾಪ್ಸ್, ಜನ್‌ರೊಬೋಟಿಕ್ ಇನ್ನೋವೇಷನ್ಸ್, ನಯನ್ ಇಂಡಿಯಾ ಸೈನ್ಸ್‌ ಆ್ಯಂಡ್ ಟೆಕ್ನಾಲಜೀಸ್, ನಿಯೋಡಾಕ್ಸ್‌ ಹೆಲ್ತ್‌ಕೇರ್, ನ್ಯೂಮ್‌ರಾ ಟೆಕ್ ಲ್ಯಾಬ್‌, ಕ್ಯೂರ್ ಎಐ ಟೆಕ್ನಾಲಜೀಸ್, ಸರ್ವ್ ಡೀಪ್‌ಕಾಲ್ (ನಾಮ್‌), ತರೀಸಾ ಟೆಕ್ನಾಲಜೀಸ್ ಮತ್ತು ಟಿಟೋಡಿ ಇನ್‌ಫೋಟೆಕ್ (ಕಿಸಾನ್‌ಎಐ).